ಕುಂಜತ್ತೂರು: ಜಿ.ವಿ.ಎಚ್.ಎಸ್.ಎಸ್ ಕುಂಜತ್ತೂರು ಶಾಲೆಯಲ್ಲಿ ಎರಡು ದಿನಗಳ ಕಾಲ ನಡೆದ 2023-24ನೇ ಶೈಕ್ಷಣಿಕ ವರ್ಷದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಸ್ತ್ರೋತ್ಸವದ ಸಮಾರೋಪ ಸಮಾರಂಭವು ಅಕ್ಟೋಬರ್ 31ರಂದು ಜರುಗಿತು.
ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿರುವ ಶ್ರೀಮತಿ ಬೇಬಿ ಬಾಲಕೃಷ್ಣನ್ ತಮ್ಮ ಸಮಾರೋಪ ಭಾಷಣದಲ್ಲಿ ‘ನವ ಭಾರತದ ನಿರ್ಮಾತೃಗಳ ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯಾಗುವ ಇಂತಹ ಮೇಳಗಳು ಮಕ್ಕಳ ಕಲಿಕೆಯ ಸಾಧ್ಯತೆಗಳನ್ನು ವಿಸ್ತರಿಸುತ್ತವೆ. ಹಲವು ಸ್ಟಾರ್ಟ್ಅಪ್ ಗಳನ್ನು ನಾವಿಲ್ಲಿ ಕಾಣಬಹುದು’ ಎಂಬುದಾಗಿ ನುಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಖಾದರ್ ಹನೀಫ್ ಎಸ್.ಕೆ, ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕಾಸರಗೋಡು ಡಿ.ಡಿ.ಇ.ಶ್ರೀ ನಂದಿಕೇಶನ್ ಹಾಗೂ ಡಿ.ಇ.ಒ ಶ್ರೀದಿನೇಶ್.ವಿ., ವಿ.ಎಚ್.ಎಸ್.ಇ, ಪಯ್ಯನ್ನೂರು ವಿಭಾಗದ ಉಪನಿರ್ದೇಶಕರಾಗಿರುವ ಶ್ರೀಮತಿ ಉದಯಕುಮಾರಿ ಇವರನ್ನು ಸ್ಟಾಫ್ ಕೌನ್ಸಿಲ್ ವತಿಯಿಂದ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಶಾಸ್ತ್ರೋತ್ಸವದ ಯಶಸ್ಸಿಗಾಗಿ ದುಡಿದ ಹಿರಿಯರಾದ ಈಶ್ವರ ಸರ್, ಹಿರಿಯ ಶಿಕ್ಷಕರುಗಳಾದ ಶ್ರೀಮತಿ ಅಮಿತಾ, ಶ್ರೀಮತಿ ಅನಿತಾ, ಶ್ರೀ ರವೀಂದ್ರ ರೈ ಇವರನ್ನು ಪ್ರೀತಿಯ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಮಂಜೇಶ್ವರ ಉಪಜಿಲ್ಲಾ ಪ್ರಭಾರ ಸಹಾಯಕ ವಿದ್ಯಾಧಿಕಾರಿಗಳಾದ ಶ್ರೀ ಜಿತೇಂದ್ರ, HM ಫಾರಂನ ಅಧ್ಯಕ್ಷರಾದ ಶ್ರೀ ಶ್ಯಾಮ ಭಟ್, ಬಿಪಿಸಿ ಶ್ರೀ ವಿಜಯಕುಮಾರ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಬಾಲಕೃಷ್ಣ.ಜಿ, ಸ್ಟಾಫ್ ಸೆಕ್ರೆಟರಿ ಶ್ರೀ ದಿವಾಕರ ಬಲ್ಲಾಳ್ ಉಪಸ್ಥಿತರಿದ್ದರು. ಗಣಿತ, ವಿಜ್ಞಾನ, ಐ.ಟಿ.ಮೇಳಗಳಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿ ಚಾಂಪಿಯನ್ ಆದ ಶಾಲೆಗಳಿಗೆ ಸ್ಮರಣಿಕೆಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ವಿ.ಎಚ್.ಎಸ್.ಸಿ.ಪ್ರಾಚಾರ್ಯರಾದ ಶ್ರೀ ಶಿಶುಪಾಲನ್ ಸ್ವಾಗತಿಸಿ, ಪ್ರೋಗ್ರಾಂ ಕಮಿಟಿ ಕನ್ವೀನರ್ ಶ್ರೀ ರವೀಂದ್ರ ರೈ ವಂದಿಸಿದರು. ಶಿಕ್ಷಕರುಗಳಾದ ಶ್ರೀ ಅಶ್ರಫ್, ಶ್ರೀಮತಿ ಕವಿತಾ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.