ಸಮುದ್ರದಾಳದ ಬೆರಗು, ಸದ್ದಿಲ್ಲದೇ ಇಸ್ರೋ ತಯಾರಿ ನಡೆಸುತ್ತಿರುವ ಸಮುದ್ರಯಾನದ ಬಗ್ಗೆ ನಿಮಗೆಷ್ಟು ಗೊತ್ತು?

Share with

ಸಮುದ್ರದಾಳದ ಕೌತುಕ, ಬೆರಗು ಇಂದು ನಿನ್ನೆಯದಲ್ಲ, ಪ್ರಪಂಚದ ಸಾಕಷ್ಟು ದೇಶಗಳು ಸಮುದ್ರದಾಳದಲ್ಲಿ ಶೋಧ ನಡೆಸುತ್ತಲೇ ಇವೆ. ಅಕ್ಟೋಬರ್ ಕೊನೆಯ ವಾರದಲ್ಲಿ ಯೋಜನೆ ಆರಂಭಗೊಳ್ಳಲಿದೆ.  ಮಾನವಸಹಿತ ಸಬ್‌ಮರ್ಸಿಬಲ್ ಮಿಷನ್ ಸಮುದ್ರಯಾನ ಯೋಜನೆಯನ್ನು ಭಾರತ ಸರ್ಕಾರ ಅನುಷ್ಠಾನಕ್ಕೆ ತರಲು ಹೊರಟಿದೆ. ಈ ಯೋಜನೆ ಅಡಿಯಲ್ಲಿ ಮತ್ಸ್ಯ 6000′ ಜಲಾಂತರ್ಗಾಮಿ ನೌಕೆಯನ್ನು ಅಭಿವೃದ್ಧಿಪಡಿಸಲಾಗಿದೆ.

ಅಕ್ಟೋಬರ್ 2021 ರಲ್ಲಿ, ಸುಧಾರಿತ ಸಬ್‌ಮರ್ಸಿಬಲ್ ಸಾಮರ್ಥ್ಯಗಳೊಂದಿಗೆ ಅಮೆರಿಕ, ರಷ್ಯಾ, ಜಪಾನ್, ಫ್ರಾನ್ಸ್ ಮತ್ತು ಚೀನಾ ಸೇರಿದಂತೆ ದೇಶಗಳ ಆಯ್ದ ಕ್ಲಬ್‌ಗೆ ಭಾರತ ಸೇರಿಕೊಂಡಿತು. ಈ ಮೂಲಕ ವಿಶಿಷ್ಟವಾದ ಸಮುದ್ರಯಾನ ಮಿಷನ್ ಉಡಾವಣೆಯ ಭಾಗವಾಗಿತು.

ಇಸ್ರೋದ ಚಂದ್ರಯಾನ ಮತ್ತು ಆದಿತ್ಯ ಎಲ್ 1 ನಂತರ ಇದು ಭಾರತದ ಅತಿದೊಡ್ಡ ಮಿಷನ್ ಎಂದು ಹೇಳಲಾಗುತ್ತಿದೆ. ಸಮುದ್ರಯಾನ ಅಭಿಯಾನ ಅಥವಾ ಮತ್ಸ್ಯ 6000 ಭಾರತದ ಮೊದಲ ಮಾನವಸಹಿತ ಜಲಾಂತರ್ಗಾಮಿ ಯಾತ್ರೆಯಾಗಿದ್ದು, ಇದರ ಮೂಲಕ ವಿಜ್ಞಾನಿಗಳು 6000 ಮೀಟರ್ ಆಳ ಸಮುದ್ರಕ್ಕೆ ಹೋಗಿ ಅಲ್ಲಿನ ಪರಿಸ್ಥಿತಿಗಳು ಮತ್ತು ಪ್ರಕ್ರಿಯೆಗಳನ್ನು ವಿಶೇಷ ಉಪಕರಣಗಳು ಮತ್ತು ಸಂವೇದಕಗಳ ಮೂಲಕ ಅಧ್ಯಯನ ಮಾಡುತ್ತಾರೆ.


Share with

Leave a Reply

Your email address will not be published. Required fields are marked *