ಉಡುಪಿ: ಕಾಂಗ್ರೆಸ್ ನವರಿಗೆ ಭಾಷೆ ಬಗ್ಗೆ ಅಷ್ಟು ಪ್ರೇಮ ಇದ್ರೆ ಎಲ್ಲ ಕ್ಷೇತ್ರಗಳಲ್ಲೂ ಹಿಂದಿ ಪಂಡಿತರನ್ನು ನಿಲ್ಲಿಸಲಿ: ಪ್ರಮೋದ್ ಮಧ್ವರಾಜ್

Share with

ಉಡುಪಿ: ಕಾಂಗ್ರೆಸ್ ಪಕ್ಷದವರಿಗೆ ಭಾಷೆಯ ಬಗ್ಗೆ ಅಷ್ಟೊಂದು ಪ್ರೇಮ ಇದ್ರೆ ಎಲ್ಲ 28 ಲೋಕಸಭೆ ಕ್ಷೇತ್ರಗಳಲ್ಲೂ ಹಿಂದಿ ಪಂಡಿತರನ್ನು ತಂದು ನಿಲ್ಲಿಸಲಿ ಎಂದು ಪ್ರಮೋದ್ ಮಧ್ವರಾಜ್ ತಿರುಗೇಟು ನೀಡಿದ್ದಾರೆ.

ಉಡುಪಿ ಬಿಜೆಪಿ ಕಚೇರಿಯಲ್ಲಿ ಮಾ.29ರಂದು ನಡೆದ ಸುದ್ದಿಗೋಷ್ಠಿ

ಉಡುಪಿ ಬಿಜೆಪಿ ಕಚೇರಿಯಲ್ಲಿ ಮಾ.29ರಂದು ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕೋಟ ಶ್ರೀನಿವಾಸ್ ಪೂಜಾರಿ ಗ್ರಾಪಂ ಸದಸ್ಯನಿಂದ ಹಿಡಿದು ಮಂತ್ರಿಯಾಗುವ ತನಕ ಎಲ್ಲ ಹಂತಗಳಲ್ಲಿ ಜನಸೇವೆ ಮಾಡಿ ಅನುಭವ ಇರುವವರು.

ಭಾಷೆ ಮುಖ್ಯ ಅಲ್ಲ, ಭಾಷೆಗಿಂತ ಮಾಡಿದ ಕೆಲಸ ಮುಖ್ಯ. ಈಗ ಉತ್ತರ ಪ್ರದೇಶದಿಂದ ಬಂದವರು ಉಡುಪಿ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿಲ್ಲವೇ? ಎಂದು ಪ್ರಶ್ನಿಸಿದ್ದ ಅವರು, ಉಡುಪಿಯಿಂದ ಆಯ್ಕೆಯಾಗಿ ಹೋಗಿ ದೆಹಲಿಯಲ್ಲಿ ಕೆಲಸ ಮಾಡಲು ಕಷ್ಟ ಏನಿಲ್ಲ. ಕೆಲಸ ಮಾಡುವವರಿಗೆ ಭಾಷೆ ಮುಖ್ಯ ಅಂತ ಅನಿಸುವುದಿಲ್ಲ ಎಂದರು.


Share with

Leave a Reply

Your email address will not be published. Required fields are marked *