ಬಂಟ್ವಾಳ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ಕಕ್ಯೆಪದವಿನಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ ನಡೆಯಿತು.
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಮಾತನಾಡಿ, ಈ ಬಾರಿ ಕಾಂಗ್ರೆಸ್ ವಿಜಯ ಪತಾಕೆ ಹಾರಿಸಲಿದೆ. ಹಾಗೆಂದು ಸುಮ್ಮನಾಗದಿರಿ. ನಮ್ಮ ಇಷ್ಟು ದಿನದ ಶ್ರಮ ವ್ಯರ್ಥವಾಗಬಾರದು. ಹಾಗಾಗಿ ಮುಂದಿನ ನಾಲ್ಕು ದಿನ ಶ್ರಮಿಸಿ. ಮುಂದೆ ಕಾಂಗ್ರೆಸ್ ನಿಮ್ಮ ಏಳಿಗೆಗಾಗಿ, ಬಡವರ ಕಣ್ಣೀರೊರೆಸಲು ಶ್ರಮಿಸಲಿದೆ ಎಂದರು.
ಮಾಜಿ ಸಚಿವ ಬಿ. ರಮಾನಾಥ ರೈ, ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್, ಸುಧೀರ್ ಕುಮಾರ್ ಶೆಟ್ಟಿ, ಪ್ರಚಾರ ಸಮಿತಿ ಅಧ್ಯಕ್ಷ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ, ಜಿಲ್ಲಾ ಪ್ರಚಾರ ಸಮಿತಿಯ ಪಿಯೂಷ್ ರೋಡ್ರಿಗಸ್, ಸುದರ್ಶನ್ ಜೈನ್, ಬಂಟ್ವಾಳ ಬ್ಲಾಕ್ ಪ್ರಚಾರ ಸಮಿತಿಯ ಜಗದೀಶ್ ಕೊಯಿಲ, ಮಾಯಿಲಪ್ಪ ಸಾಲ್ಯಾನ್, ಕೈಲಾರ್ ಇಬ್ರಾಹಿಂ, ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ್ ಜೋರಾ, ಇಬ್ರಾಹಿಂ ನವಾಜ್, ಮಧುಸೂಧನ್ ಶೆಣೈ, ಸಂಜೀವ ಗೌಡ, ಚೆನ್ನಪ್ಪ ಸಾಲ್ಯಾನ್, ಅಬ್ದುಲ್ ರಹಿಮಾನ್, ಪರಮೇಶ್ವರ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.