ಅಯೋಧ್ಯೆಯ ರಾಮ ಮಂದಿರದಲ್ಲಿ ಧ್ವಜಾರೋಹಣ ಸಮಾರಂಭದ ಈ ಕ್ಷಣ ವಿಶಿಷ್ಟ ಮತ್ತು ಅಲೌಕಿಕವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ಧರ್ಮ ಧ್ವಜವು ಕೇವಲ ಧ್ವಜವಲ್ಲ. ಇದು ಭಾರತೀಯ ನಾಗರಿಕತೆಯ ಪುನರುಜ್ಜಿವನದ ಧ್ವಜವಾಗಿದೆ.

ಶತಮಾನಗಳ ನೋವು ಇಂದು ಕೊನೆಗೊಳ್ಳುತ್ತಿದೆ, ಶತಮಾನಗಳ ಸಂಕಲ್ಪ ಇಂದು ಯಶಸ್ಸನ್ನು ಸಾಧಿಸುತ್ತಿದೆ. 500 ವರ್ಷಗಳ ಕಾಲ ಹೊತ್ತಿಕೊಂಡ ಆ ಯಾಗ ಇಂದು ಅಂತ್ಯವಾಗಿದೆ. ಬಡತನವಿಲ್ಲದ ಅಥವಾ ಅಸಹಾಯಕರಲ್ಲದ ಸಮಾಜವನ್ನು ಸೃಷ್ಟಿಸೋಣ ಎಂದು ಮೋದಿ ಹೇಳಿದ್ದಾರೆ.




