ಬಂಟ್ವಾಳ: ಬಿ.ಸಿ ರೋಡಿನ ಕನ್ನಡ ಭವನದಲ್ಲಿ ‘ಅಭಿರುಚಿ’ ಜೋಡುಮಾರ್ಗ ವತಿಯಿಂದ ಮಂಗಳೂರಿನ ಜರ್ನಿ ಥೇಟರ್ ಗ್ರೂಪ್ ಪ್ರಸ್ತುತ ಪಡಿಸುವ ರಂಗಸಂಗೀತ ಹಾಗೂ ಜನಪದ ಗೀತೆಗಳು ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.
ಕನ್ನಡದ ಹವ್ಯಾಸಿ ನಾಟಕಗಳಿಂದ ಆಯ್ದ ಗೀತೆಗಳನ್ನು ಪ್ರಸ್ತುತ ಪಡಿಸಲಾಯಿತು. ಆಧುನಿಕ ಕನ್ನಡ ರಂಗಭೂಮಿ ನಡೆದು ಬಂದ ದಾರಿಯನ್ನೂ ನೆನಪಿಸಿದ ಕಾರ್ಯಕ್ರಮದಲ್ಲಿ ರಂಗ ಸಂಗೀತ ಕ್ಷೇತ್ರಕ್ಕೆ ‘ರಂಗ ಜಂಗಮ’ ಎಂದೇ ಖ್ಯಾತರಾದ ಬಿ.ವಿ.ಕಾರಂತರು ನೀಡಿದ ಹೊಸ ಆಯಾಮ, ಮಹತ್ತರ ಕೊಡುಗೆಯನ್ನು ನೆನೆಯುವಂತೆ ಮಾಡಿತು ಕವಿ ರಾಧೇಶ ತೋಳ್ಪಾಡಿ ಪ್ರಸ್ತಾವನೆಯ ಮಾತುಗಳೊಂದಿಗೆ ಸ್ವಾಗತಿಸಿದರು. ಪ್ರಾಧ್ಯಾಪಕ ಚೇತನ್ ಮುಂಡಾಜೆ ವಂದಿಸಿದರು.