ಕೊಲ್ಲಿ ಉದ್ಯೋಗಿ ಮನೆಯಿಂದ ಚಿನ್ನಾಭರಣ ಸಹಿತ ನಗದು ಕಳವು: ಆರೋಪಿಗಳ ದೃಶ್ಯ ಸಿಸಿ ಕ್ಯಾಮರದಲ್ಲಿ ಪತ್ತೆ ಪೋಲೀಸರಿಂದ ತನಿಖೆ

Share with

ಮಂಜೇಶ್ವರ: ಬೀಗ ಜಡಿದ ಕೊಲ್ಲಿ ಉದ್ಯೋಗಿಯ ಮನೆಯಿಂದ ಚಿನ್ನಾಭರ ಹಾಗೂ ನಗದು ಕಳವು ಕೃತ್ಯ ನಡೆದಿದೆ. ಮಂಜೇಶ್ವರ ಸಮೀಪದ ಮಚ್ಚಂಪಾಡಿ ಸಿ.ಎಂ ನಗರ ನಿವಾಸಿ ಕೊಲ್ಲಿ ರಾಷ್ಟçದಲ್ಲಿ ಉದ್ಯೋಗಿಯಾಗಿರುವ ಇಬ್ರಾಹಿಂ ಕಲೀಲ್ ಎಂಬವರ ಎರಡಂಸ್ತಿನ ಮನೆಯಿಂದ ೯ಪವನ್ ಹಾಗೂ ೯ಲಕ್ಷ ರೂ ಕಳವು ನಡೆದಿರುವುದಾಗಿ ದೂರಲಾಗಿದೆ. ಮನೆಯವರು ಕೊಲ್ಲಿ ರಾಷ್ಟçದಲ್ಲಿದ್ದು, ಮನೆಗೆ ಬೀಗ ಹಾಕಲಾಗಿದೆ. ಭಾನುವಾರ ಮನೆಯೊಳಗೆ ಇಬ್ಬರು ಹೆಲ್ಮೆಟ್‌ಧರಿಸಿ ಕಳವು ನಡೇಸುತ್ತಿರುವ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಕೊಲ್ಲಿಯಲ್ಲಿರುವ ಇಬ್ರಾಹಿಂ ಖಲೀಲ್ ರವರು ಮನೆಗೆ ಕಳ್ಳರು ನುಗ್ಗಿದ ದೃಶ್ಯವನ್ನು ಕಂಡು ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಮಂಜೇಶ್ವರ ಪೋಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸುತ್ತಿದ್ದಾರೆ. ಇಂದು ಬೆರಳಚ್ಚು ಹಾಗೂ ಶ್ವಾನ ದಳ ತಲುಪಿ ತನಿಖೆ ನಡೆಸಲಾಗುದೆಂದು ಪೋಲೀಸರು ತಿಳಿಸಿದ್ದಾರೆ. ಮಂಜೇಶ್ವರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಕೃತ್ಯ ವ್ಯಾಪಕಗೊಳ್ಳುತ್ತಿದ್ದು, ಆರೋಪಿಗಳನ್ನು ಸೆರೆಹಿಡಿಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಊರವರು ಆತಂಕಗೊಂಡಿದ್ದಾರೆ. ಹೆಚ್ಚಾಗಿ ಬೀಗ ಹಾಕಿದ ಮನೆಗಳನ್ನೇ ಆಯ್ಕೆ ಮಾಡಿ ತಂಡ ಕಳವು ನಡೆಸಲಾಗಿದೆ. ಕಳೆದ ತಿಂಗಳ ೨೮ರಂದು ಉಪ್ಪಳ ಪತ್ವಾಡಿ ರಸ್ತೆಯ ಮೊಹಮ್ಮದಲಿ ಸ್ಟಿçÃಟ್ ನಿವಾಸಿ ಕೊಲ್ಲಿ ಉದ್ಯೋಗಿ ಅಬ್ದುಲ್ ರಜಾಕ್ ಎಂಬವರ ಮನೆಯಿಂದ ೫ ಪವನ್ ಹಾಗೂ ೩೦ ಸಾವಿರ ರೂ, ಉಪ್ಪಳ ಮಜಲ್ ನಿವಾಸಿ ಮೊಹಮ್ಮದ್ ರಫೀಕ್ ಎಂಬವರ ಮನೆಯಿಂದ ೧೯ರಂದು ೭ ಪವನ್ ಹಾಗೂ ೬೦ ಸಾವಿರ ರೂ ಕಳವುಗೈಯ್ಯಲಾಗಿದೆ. ಕುಟುಂಬ ಉಮ್ರಕ್ಕೆ ತೆರಳಿದ ಸಂದರ್ಭದಲ್ಲಿ ಕಳವು ನಡೆದಿದೆ. ಈ ತಿಂಗಳ ೫ರಂದು ಉಪ್ಪಳ ರೈಲ್ವೇ ನಿಲ್ದಾಣ ಪರಿಸರದಲ್ಲಿರುವ ಅಯ್ಯಪ್ಪ ಮಂದಿರದ ಶೆಡ್ಡ್. ನಲ್ಲಿ ನಿದ್ರಿಸುತ್ತಿದ್ದ ಉಪ್ಪಳ ಪುತ್ತೂರು ಮಧ್ಯೆ ಸಂಚರಿಸುವ ಕರ್ನಾಟಕ ಬಸ್ ಸಿಬ್ಬಂದಿಗಳ ೧೧,೧೧೨ ರೂ ಕಳವುಗೈದ ಘಟನೆ ನಡೆದಿದೆ. ಕಳವು ವ್ಯಾಪಕಗೊಂಡಿರುವ ಹಿನ್ನೆಲೆಯಲ್ಲಿ ಊರವರು ಆತಂಕಗೊAಡಿದ್ದಾರೆ. ಆರೋಪಿಗಳನ್ನು ಕೂಡಲೇ ಸೆರೆಹಿಡಿಯ ಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


Share with

Leave a Reply

Your email address will not be published. Required fields are marked *