ಸಿರಿಬಾಗಿಲಿನಲ್ಲಿ ತೆಂಕುತಿಟ್ಟು ಯಕ್ಷಗಾನದ ಹಿಮ್ಮೇಳ ಕಲಾವಿದರ ಶಿಬಿರ

Share with

ಕಾಸರಗೋಡು : ಸಾಂಸ್ಕೃತಿಕ ಕ್ಷೇತ್ರದ ಅಧ್ಯಯನ ಯೋಗ್ಯ ಚಟುವಟಿಕೆಗಳಿಗೆ ಪ್ರಧಾನವನಿಸಿದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ಜುಲೈ 27ರಂದು ಆದಿತ್ಯವಾರ ತೆಂಕುತಿಟ್ಟಿನ ಯಕ್ಷಗಾನ ಹಿಮ್ಮೇಳ ಕಲಾವಿದರಿಗೆ ವಿಶೇಷ ಶಿಬಿರ ಜರಗಲಿದೆ.

ಈ ಶಿಬಿರವನ್ನು ತೆಂಕುತಿಟ್ಟು ಯಕ್ಷಗಾನದ ಹಿಮ್ಮೇಳ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್, ಹರಿ ನಾರಾಯಣ ಬೈಪಡಿತಾಯ ಹಾಗೂ ಪದ್ಯಾಣ ಶಂಕರನಾರಾಯಣ ಭಟ್ ಇವರು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಗೌರವಾನ್ವಿತ ಟಿ. ಶ್ಯಾಮ ಭಟ್ ಅವರು ಭಾಗವಹಿಸಲಿದ್ದಾರೆ. ತೆಂಕುತಿಟ್ಟು ಯಕ್ಷಗಾನದ ಐವತ್ತಕ್ಕೂ ಹೆಚ್ಚು ವೃತ್ತಿಪರ ಹವ್ಯಾಸಿ, ಹಿಮ್ಮೇಳದ ಕಲಾವಿದರು ಭಾಗವಹಿಸಲಿದ್ದಾರೆ. ಈ ಶಿಬಿರದ ಜೊತೆ ಶ್ರೀ ಸತ್ಯಸಾಯಿ ಸೇವಾ ಸಮಿತಿ ಪೆರ್ಲ ಇವರ ಸಹಭಾಗಿತ್ವದಲ್ಲಿ ಡಾ. ಕೃಷ್ಣ ಮೋಹನ ಪೆರ್ಲ ಮತ್ತು ಡಾ. ಸತ್ಯನಾರಾಯಣ ಇವರ ಮಾರ್ಗದರ್ಶನದಲ್ಲಿ ಕಲಾವಿದರಿಗೆ ಹಾಗೂ ನಾಗರಿಕರಿಗೆ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರವು ನಡೆಯಲಿರುತ್ತದೆ .ಇದರ ಪ್ರಯೋಜನವನ್ನು ಕಲಾವಿದರು ನಾಗರಿಕರು ಪಡೆದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಿರಿಬಾಗಿಲು ಪ್ರತಿಷ್ಠಾನವು ಪ್ರಕಟಣೆ ಮೂಲಕ ತಿಳಿಸಿದೆ.


Share with

Leave a Reply

Your email address will not be published. Required fields are marked *