
ಬಡವರ ಸೇಬು ಎಂದೇ ಖ್ಯಾತಿ ಪಡೆದಿರುವ ಸೀಬೆ ಅಥವಾ ಪೇರಳೆ ಹಣ್ಣು, ಮನುಷ್ಯನ ಆರೋಗ್ಯಕ್ಕೆ ಹೇಳಿ ಮಾಡಿಸಿದ ಹಣ್ಣು ಎಂದರೆ ತಪ್ಪಾಗ ಲಾರದು. ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ, ಈ ಹಣ್ಣು ತುಂಬಾನೇ ಒಳ್ಳೆಯದು. ಇದಕ್ಕಾಗಿಯೇ ಸೇಬಿನ ಬದಲು ದಿನಕ್ಕೊಂದು ಸೀಬೆ ಹಣ್ಣು ತಿಂದು ವೈದ್ಯರಿಂದ ದೂರ ಇರಿ ಎಂದು ಹೇಳಬಹುದು!
ಪೇರಳೆ ಅಥವಾ ಸೀಬೆ ಹಣ್ಣುಗಳಲ್ಲಿ ಸಿಗುವ, ವಿಟಮಿನ್ಸ್ ಗಳು ಹಾಗೂ ಖನಿಜಾಂಶಗಳು ನಮ್ಮ ಆರೋಗ್ಯಕ್ಕೆ ತುಂಬಾನೇ ಲಾಭಕಾರಿ ಎಂದು ಆರೋಗ್ಯ ತಜ್ಞರು ಅಭಿಪ್ರಾಯ ಪಡುತ್ತಾರೆ.ಪ್ರಮುಖವಾಗಿ, ಈ ಹಣ್ಣಿನಲ್ಲಿ ಕಿತ್ತಳೆ ಹಣ್ಣಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ ಇದೆ, ಇದರ ಜೊತೆಗೆ, ಕ್ಯಾಲ್ಸಿಯಂ, ನಾರಿನಾಂಶ, ಕಬ್ಬಿನಾಂಶ, ಪೊಟಾಶಿಯಂ, ಮೆಗ್ನಿಶಿಯಂ ಮತ್ತು ಪೋಸ್ಪರಸ್ ಅಂಶಗಳು ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ.
ದಿನಕ್ಕೊಂದು ಸೀಬೆ ಹಣ್ಣನ್ನು ಸೇವನೆ ಮಾಡುತ್ತಾ ಬರುವುದರಿಂದ, ಅಧಿಕ ರಕ್ತದೊತ್ತಡ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅಂಶಗಳು, ನಿಯಂತ್ರಣಕ್ಕೆ ಬರುವುದು ಎಂದು ಸಂಶೋಧನೆಗಳು ಕೂಡ ಕಂಡುಕೊಂಡಿವೆ.ಇದಕ್ಕೆ ಪ್ರಮುಖ ಕಾರಣ, ಈ ಹಣ್ಣಿನಲ್ಲಿ ಸಿಗುವ ಪೊಟಾ ಶಿಯಂ, ಕರಗುವ ನಾರಿನಾಂಶ, ಹಾಗೂ ವಿಟಮಿನ್ ಸಿ ಅಂಶಗ
ಸೀಬೆ ಹಣ್ಣಿನಲ್ಲಿ ಅಪಾರ ಪ್ರಮಾಣದ ಪೌಷ್ಟಿಕಾಂಶಗಳ ಜೊತೆಗೆ ಪ್ರಬಲ ಆಂಟಿ ಆಕ್ಸಿಡೆಂಟ್ ಅಂಶಗಳು ಕೂಡ ಕಂಡು ಬರುತ್ತದೆ. ಇವು ದೇಹದ ಉರಿಯೂತಕ್ಕೆ ಕಾರಣವಾಗುವ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡಿ ನಮ್ಮ ಹೃದಯ ಹಾಗೂ ರಕ್ತ ನಾಳಗಳನ್ನು ರಕ್ಷಿಸುತ್ತದೆ