ಉಡುಪಿ: ಸರಕಾರದಿಂದ ವಿವಿಧ ಪರಿಹಾರ ನಿಧಿಯಿದೆ. ಆದರೇ ಶಿಕ್ಷಣ ಇಲಾಖೆಯಲ್ಲಿ ಮಕ್ಕಳ ದುರಂತಗಳಿಗೆ ಮಾತ್ರ ಪ್ರತ್ಯೇಕ ಪರಿಹಾರ ನಿಧಿ ಇಲ್ಲ. ಇದರಿಂದ ಮಕ್ಕಳ ದುರಂತ ಸಂದರ್ಭ ಮಕ್ಕಳು ಪರಿಹಾರಕ್ಕಾಗಿ ಕೈಯೊಡ್ಡುವ ದುಃಸ್ಥಿತಿ ರಾಜ್ಯದಲ್ಲಿದೆ.
45 ಲಕ್ಷಕ್ಕೂ ಅಧಿಕ ಮಕ್ಕಳ ವ್ಯಾಸಂಗ:ರಾಜ್ಯದಲ್ಲಿ 47,757 ಪ್ರಾಥಮಿಕ ಹಾಗೂ ಪ್ರೌಢಶಾಲೆ, 1229 ಕಾಲೇಜುಗಳಲ್ಲಿ 45 ಲಕ್ಷಕ್ಕೂ ಅಧಿಕ ಮಕ್ಕಳು ಸರಕಾರಿ ವ್ಯವಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಅವಧಿಯಲ್ಲಿ ಕೆಲವೊಂದು ದುರಂತಗಳು ಅಲ್ಲಲ್ಲಿ ನಡೆಯುವುದು ಕಂಡು ಬರುತ್ತದೆ. ಸಾವು-ನೋವು ಪ್ರಕರಣಗಳು ಆಗಾಗ್ಗೆ ದಾಖಲಾಗುತ್ತಲೇ ಇ ರುತ್ತದೆ. ಅವಘಡ, ದುರಂತ ಸಂಭವಿಸದಂತೆ ಎಚ್ಚರ ವಹಿಸಿದರೂ ಮಕ್ಕಳು ಒಂದಲ್ಲ ಒಂದು ದುರಂತಗಳಿಗೆ ಒಳಗಾಗುತ್ತಿ ರುತ್ತಾರೆ. ಶಾಲೆಗಳಲ್ಲಿ ನಡೆಯುವ ಇಂತಹ ದುರ್ಘಟನೆ ಗಳಿಗೆ ಕಡಿವಾಣ ಬೀಳುತಿಲ್ಲ.
ಮಕ್ಕಳ ರಕ್ಷಣಾ ಆಯೋಗದಿಂದ
ಸರಕಾರಕ್ಕೆ ಶಿಫಾರಸ್ಸು: ಶಾಲಾ ಸಮಯ, ಶಾಲಾ ಚಟುವಟಿಕೆಗಳಲ್ಲಿ ಉಂಟಾದ ದುರಂತಗಳಲ್ಲಿ ಸಂತ್ರಸ್ತ ಮಕ್ಕಳಿಗೆ ಸೂಕ್ತ ಪರಿಹಾರ ನೀಡಲು ಪ್ರತ್ಯೇಕ ಪರಿಹಾರ ನಿಧಿ ಸ್ಥಾಪಿಸಲು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ 2023ರ ಡಿಸೆಂಬರ್ ನಲ್ಲಿ ಸರಕಾರಕ್ಕೆ ಶಿಫಾರಸು ಮಾಡಿದ್ದರೂ ಇದುವರೆಗೆ ಸರಕಾರ, ಶಿಕ್ಷಣ ಇಲಾಖೆ ಈ ಬಗ್ಗೆ ಗಂಭೀರವಾಗಿ ಯೋಚಿಸಿಲ್ಲ. ಪ್ರತ್ಯೇಕ
ಮಾರ್ಗಸೂಚಿಯನ್ನು ಸಿದ್ಧಪಡಿಸಿಲ್ಲ.
ಪರಿಹಾರ ವೆಚ್ಚ ಪರಿಹಾರಕ್ಕೆ ಪರದಾಟ: ಗಂಭೀರ ಪ್ರಕರಣಗಳಲ್ಲಿ ಪರಿಹಾರ, ಮಕ್ಕಳ ಚಿಕಿತ್ಸಾ ವೆಚ್ಚ ಭರಿಸಲು ಹಣಕ್ಕಾಗಿ ಪರದಾಡಬೇಕಾದ ದಯಾನೀಯ ಪರಿಸ್ಥಿತಿ ಶಾಲೆಗಳಲ್ಲಿದೆ.