ಹುರೂನ್ ಶ್ರೀಮಂತ ಭಾರತೀಯ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಅಚ್ಚರಿಯ ಹೆಸರು ಬಂದಿದೆ. ಎಚ್ಸಿಎಲ್ ಟೆಕ್ನಾಲಜೀಸ್ನ ರೋಷನಿ ನಾದರ್ ಮಲ್ಹೋತ್ರಾ ಹಾಗೂ ಕುಟುಂಬವು ಇದೇ ಮೊದಲ ಬಾರಿಗೆ ಟಾಪ್-3 ಸ್ಥಾನ ಪಡೆದಿದೆ. ಈ ಫ್ಯಾಮಿಲಿಯ ಆಸ್ತಿಮೌಲ್ಯ 2.84 ಲಕ್ಷ ಕೋಟಿ ರೂ. ರೋಷನಿ ನಾದರ್ ಇದರೊಂದಿಗೆ ಭಾರತದ ಅತ್ಯಂತ ಶ್ರೀಮಂತ ಮಹಿಳೆ ಎನಿಸಿದ್ದಾರೆ.
ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ಡಿಎ ಶೇ. 3 ಏರಿಕೆ; 1 ಕೋಟಿ ಉದ್ಯೋಗಿಗಳು, ಪಿಂಚಣಿದಾರರಿಗೆ ಖುಷಿ ಸುದ್ದಿ
ಹುರೂನ್ ಇಂಡಿಯಾ ಶ್ರೀಮಂತರ ಪಟ್ಟಿ 2025ರ ಟಾಪ್-10
ಮುಕೇಶ್ ಅಂಬಾನಿ ಕುಟುಂಬ: 9.55 ಲಕ್ಷ ಕೋಟಿ ರೂ
ಗೌತಮ್ ಅದಾನಿ ಕುಟುಂಬ: 8.14 ಲಕ್ಷ ಕೋಟಿ ರೂ
ರೋಷನಿ ನಾದರ್ ಮಲ್ಹೋತ್ರಾ ಕುಟುಂಬ: 2.84 ಲಕ್ಷ ಕೋಟಿ ರೂ
ಸೈರಸ್ ಪೂನಾವಾಲ ಕುಟುಂಬ: 2.46 ಲಕ್ಷ ಕೋಟಿ ರೂ
ಕುಮಾರಮಂಗಲಂ ಬಿರ್ಲಾ ಕುಟುಂಬ: 2.32 ಲಕ್ಷ ಕೋಟಿ ರೂ
ನೀರಜ್ ಬಜಾಜ್ ಕುಟುಂಬ: 2.32 ಲಕ್ಷ ಕೋಟಿ ರೂ
ದಿಲೀಪ್ ಸಾಂಘವಿ: 2.30 ಲಕ್ಷ ಕೋಟಿ ರೂ
ಅಜೀಮ್ ಪ್ರೇಮ್ಜಿ ಕುಟುಂಬ: 2.21 ಲಕ್ಷ ಕೋಟಿ ರೂ
ಗೋಪಿಚಂದ್ ಹಿಂದೂಜಾ ಫ್ಯಾಮಿಲಿ: 1.85 ಲಕ್ಷ ಕೋಟಿ ರೂ
ರಾಧಾಕಿಶನ್ ದಮಾನಿ ಕುಟುಂಬ: 1.82 ಲಕ್ಷ ಕೋಟಿ ರೂ
ಪತಂಜಲಿ ಆಯುರ್ವೇದ್ ಸಂಸ್ಥೆಯ ಸಹ-ಸಂಸ್ಥಾಪಕ ಆಚಾರ್ಯ ಬಾಲಕೃಷ್ಣ ಅವರು 43,640 ಕೋಟಿ ರೂನೊಂದಿಗೆ 57ನೇ ಅತಿ ಶ್ರೀಮಂತ ಭಾರತೀಯ ಎನಿಸಿದ್ದಾರೆ. ಮೇಘ ಎಂಜಿನಿಯರಿಂಗ್ ಸಂಸ್ಥೆಯ ಪಿ ಪಿಚಿ ರೆಡ್ಡಿ ಹಾಗೂ ಪಿವಿ ಕೃಷ್ಣ ರೆಡ್ಡಿ ಅವರು ಕ್ರಮವಾಗಿ 60 ಮತ್ತು 62ನೇ ಸ್ಥಾನದಲ್ಲಿದ್ದಾರೆ.





