“ನನ್ನನ್ನು ಬೆದರಿಸಿ ಹೇಳಿಕೆ ಪಡೆದುಕೊಂಡಿದ್ದಾರೆ.. ಅನನ್ಯ ಭಟ್ ನನ್ನ ಮಗಳು” ಎಂದ ಸುಜಾತ ಭಟ್

Share with

ಮಂಗಳೂರು: ನನ್ನನ್ನು ಕಾರಲ್ಲಿ ಕೂಡಿ ಹಾಕಿ ಹೇಳಿಕೆ ಪಡೆಡಿದ್ದಾರೆ ಎಂದು ಸುಜಾತ ಭಟ್ ಹೇಳಿಕೊಂಡಿದ್ದಾರೆ. ಇಂತವರ ಹೆಸರು ಹೇಳಿ ಎಂದು ಲಾಯರ್ ಒಬ್ಬರು ಒತ್ತಾಯ ಮಾಡಿದ್ದರು ಎಂದು ಹೇಳಿದ್ದಾರೆ.

ತಿಮರೋಡಿ, ಮಟ್ಟಣ್ಣನವರ್ ಹೆಸರು ಹೇಳೋಕೆ ಹೇಳಿದ್ರು. ನಾವು ಬಚಾವ್ ಮಾಡ್ತಿವಿ ಅಂತ ಹೇಳಿದ್ರು. ಆದ್ರೆ, ಅನನ್ಯ ಭಟ್ ನನ್ನ ಮಗಳೇ, ನಾನು ಎಲ್ಲಾವನ್ನೂ ಎಸ್‌ಐಟಿ ಮುಂದೆ ಹೇಳ್ತೇನೆ. ಆಸ್ತಿ ವಿವಾದ ಇದೆ, ಹಾಗಾಂತ ಇದಕ್ಕೆ ನಾನು ಅದನ್ನ ತರಲ್ಲ. ಸಹಾಯ ಮಾಡ್ತೇನೆ ಅಂತ ಹೇಳಿದ್ರು, ಅದಕ್ಕೆ ಹಾಗಂದೆ ಎಂದು ಹೇಳಿದ್ದಾರೆ.

ಈ ಹಿಂದೆ ಸಂದರ್ಶನವೊಂದರಲ್ಲಿ ಆಸ್ತಿಗಾಗಿ ಅನನ್ಯಾ ಭಟ್‌ ಎಂಬ ಸುಳ್ಳು ಕಥೆ ಕಟ್ಟಿದೆ ಎಂದು ಹೇಳಿಕೊಂಡಿದ್ದರು. ನನಗೆ ಹೀಗೆ ಸುಳ್ಳು ಹೇಳು ಎಂದು ಕೆಲವರು ಹೇಳಿ ಕೊಟ್ಟಿದ್ದರು. ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ ಇನ್ನಿತರರು ಹೇಳಿದ್ದರು. ಆಸ್ತಿ ಸಮಸ್ಯೆಯಿಂದ ಹೀಗೆ ಹೇಳಿದ್ದೆ. ಅದಕ್ಕೆ ನಾನು ಹೇಳಿಬಿಟ್ಟೆ ಎಂದು ಒಪ್ಪಿಕೊಂಡಿದ್ದರು.

ನಾನು ಟೆನ್ಷನ್‌ನಲ್ಲಿ ಇರುತ್ತೇನೆ. ನನ್ನ ಮಗಳು ಇದ್ದಳು, ಬಲವಂತ ಮಾಡಿಸಿ ಸುಳ್ಳು ಹೇಳಿಕೆ ಪಡೆದಿದ್ದಾರೆ. ಅದಕ್ಕೆ ನಾನು ಹಾಗಂದೆ ಎಂದು ಇದೀಗ ಮತ್ತೊಂದು ಹೇಳಿಕೆಯನ್ನು ನೀಡಿದ್ದಾರೆ.


Share with

Leave a Reply

Your email address will not be published. Required fields are marked *