ಕಾಸರಗೋಡು: ಶಾಲೆ ಆವರಣದ ಅಂಗಡಿಯಿಂದ ಕಳವು ಮಾಡಿದ ಪ್ರಕರಣದಲ್ಲಿ ಬಂಧಿತ ಆರೋಪಿ ತಚ್ಚಂಗಾಡ್ ಅರವತ್‌ನ ಕ್ವಾಟ್ರಸ್ ನಲ್ಲಿ ವಾಸಿಸುವ ಪಿ.ಕೆ. ಮುಹಮ್ಮದ್ ಸಫ್ಘಾನ್(19) ಠಾಣೆಯಿಂದ ಪರಾರಿಯಾಗಿದ್ದು, ಕೂಡಲೇ ಕಾರ್ಯಾಚರಣೆ ನಡೆಸಿದ ಬೇಕಲ ಪೊಲೀಸರು ಒಂದು ಗಂಟೆಯೊಳಗೆ ತೃಕ್ಕನ್ನಾಡು ಮಲಾಂಕುನ್ನುನಿಂದ ಮತ್ತೆ ಬಂಧಿಸಿದರು. ಆತನ ವಿರುದ್ಧ ಇದೀಗ ಠಾಣೆಯಿಂದ ಪರಾರಿಯಾದ ಬಗ್ಗೆಯೂ ಪ್ರಕರಣ ದಾಖಲಿಸಲಾಗಿದೆ.
ಬೇಕಲ ಶಿಕ್ಷಣ ಉಪ ಜಿಲ್ಲೆಯ ತಚ್ಚಂಗಾಡ್ ಸರಕಾರಿ ಶಾಲೆಯ ಆವರಣದಲ್ಲಿರುವ ಅಂಗಡಿಯಿಂದ 1,000 ರೂ. ನಗದು ಮತ್ತು 25 ಸಾವಿರ ರೂ. ಮೌಲ್ಯದ ಸಾಮಗ್ರಿಗಳನ್ನು ಕಳವು ನಡೆಸಿದ ಆರೋಪ ಆತನ ಮೇಲಿದೆ.