ಸರ್ಕಾರಿ ಶಾಲೆಯಲ್ಲಿ ಕಳ್ಳರು ಕೈಚಳಕ ತೋರಿಸಿದ್ದಾರೆ. ದಾವಣಗೆರೆಯ ಜಗಳೂರು ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಘಟನೆ ನಡೆದಿದೆ.

ಶಾಲೆಯ ಬಿಸಿಯೂಟದ ಅಡುಗೆ ಕೊಠಡಿ ಬೀಗ ಮುರಿದ ಕಳ್ಳರು, ನಾಲ್ಕು ಸಿಲಿಂಡರ್, ಕಬ್ಬಿಣದ ಒಲೆ, ಒಂದು ಕ್ವಿಂಟಾಲ್ ತೊಗರಿಬೇಳೆ, ಅಡುಗೆ ಪಾತ್ರೆ ಸಾಮಗ್ರಿಗಳು, ಕ್ರೀಡಾ ಉಪಕರಣಗಳು, ದಿನಸಿ ಸಾಮಗ್ರಿ, ಮೋಟರ್ ಪಂಪ್ಗಳನ್ನು ದೋಚಿ ಪರಾರಿಯಾಗಿದ್ದಾರೆ. ಇಂದು ಬೆಳಗ್ಗೆ ಶಾಲೆಯ ಬಳಿ ಸ್ಥಳೀಯರು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.




