ಮಂಗಳೂರು: ಮಹಿಳೆಯ ಚಿನ್ನದ ಸರ ಎಗರಿಸಿದ್ದ ಕಳ್ಳರ ಬಂಧನ

Share with

ಮಂಗಳೂರು: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದ ಸರಗಳ್ಳರನ್ನು ಕಂಕನಾಡಿ ನಗರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರೆ.

ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದ ಸರಗಳ್ಳರನ್ನು ಕಂಕನಾಡಿ ನಗರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರೆ.

ಕಾಸರಗೋಡು ಜಿಲ್ಲೆಯ ಚೆರ್ಕಳ ಮೂಲದ ಪ್ರಸ್ತುತ ಬಂಟ್ವಾಳದ ಬಿ. ಮೂಡ ಗ್ರಾಮದಲ್ಲಿ ವಾಸವಾಗಿರುವ ಮೊಹಮ್ಮದ್ ಆಲಿ (32) ಮತ್ತು ಬಿ.ಮೂಡ ಗ್ರಾಮದ ನಿವಾಸಿ ಜುಬೈರ್(32) ಬಂಧಿತ‌ ಆರೋಪಿಗಳು.

ಬಜಾಲ್ ಜೆಎಂ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಕತ್ತಿನಲ್ಲಿದ್ದ 16 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಈ ಇಬ್ಬರು ಪರಾರಿಯಾಗಿದ್ದರು. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಆರೋಪಿಗಳ ಬೆನ್ನುಬಿದ್ದ ಪೊಲೀಸರು ಇಬ್ಬರನ್ನು ಬಂಧಿಸಿ, ಚಿನ್ನದ ಸರವನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿ ಮೊಹಮ್ಮದ್ ಆಲಿ ವಿರುದ್ಧ ಕಾಸರಗೋಡು ಜಿಲ್ಲೆಯ ಬದಿಯಡ್ಕ ಮಂಜೇಶ್ವರ, ಬಂಟ್ವಾಳ, ವಿಟ್ಲ ಮಂಗಳೂರಿನ ಬರ್ಕೆ ಠಾಣೆಗಳಲ್ಲಿ ಮನೆ ಕಳವು, ಸರ ಸುಲಿಗೆ, ಜೈಲಿನಲ್ಲಿ ಹೊಡೆದಾಟ ಸೇರಿ 15 ಪ್ರಕರಣ ದಾಖಲಾಗಿದೆ.

ಪೊಲೀಸ್‌ ಆಯುಕ್ತರಾದ ಅನುಪಮ್‌ ಅಗರ್‌ವಾಲ್‌ ಅವರ ಮಾರ್ಗದರ್ಶನದಲ್ಲಿ ಡಿಸಿಪಿಗಳಾದ ಸಿದ್ಧಾರ್ಥ್ ಗೋಯಲ್‌, ದಿನೇಶ್‌ ಕುಮಾರ್‌, ಎಸಿಪಿ ಧನ್ಯಾ ನಾಯಕ್‌ ಅವರು ನಿರ್ದೇಶನದಂತೆ ಕಂಕನಾಡಿ ನಗರ ಠಾಣೆಯ ನಿರೀಕ್ಷಕ ಟಿ.ಡಿ ನಾಗರಾಜ್‌ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು. ಕಾರ್ಯಚರಣೆಯಲ್ಲಿ ಪಿಎಸ್‌ಐ ಶಿವ ಕುಮಾರ್‌, ಪಿಎಸ್‌ಐ ಅನಿತಾ ನಿಕ್ಕಂ, ಎಎಸ್‌ಐಗಳಾದ ವೆಂಕಟೇಶ್‌, ಚಂದ್ರಶೇಖರ, ಸಿಬಂದಿ ಜಯಾನಂದ, ಕುಶಾಲ್‌ ಹೆಗ್ಡೆ, ದೀಪಕ್‌ ಕೋಟ್ಯಾನ್‌, ರಾಜೇಶ್‌ ಕೆ.ಎನ್‌., ರಾಘವೇಂದ್ರ, ಸಂತೋಷ್‌ ಮಾದರ್‌, ಪ್ರವೀಣ್‌ ಪಾಲ್ಗೊಂಡಿದ್ದರು.


Share with

Leave a Reply

Your email address will not be published. Required fields are marked *