ವಿಶ್ವದ ಸುಂದರ ಹ್ಯಾಂಡ್​ರೈಟರ್​ ಪ್ರಶಸ್ತಿಗೆ ಭಾಜನ ಈ ಬಾಲಕಿ! ಕೈ ಬರಹ ನೋಡಿದ್ರೆ ಬೆರಗಾಗೋದು ಗ್ಯಾರಂಟಿ..!!

Share with

ಈಗಿನ ಮಕ್ಕಳಿಗೆ ಮಾತ್ರವಲ್ಲದೇ ದೊಡ್ಡವರಿಗೂ ಕೈಬರಹ ಎನ್ನುವುದೇ ದೊಡ್ಡ ತಲೆನೋವಾಗಿ ಬಿಟ್ಟಿದೆ. ಮೊಬೈಲ್​ ಯುಗದಲ್ಲಿ ಪೆನ್ನು ಹಿಡಿದು ಬರೆಯೋದನ್ನೇ ಎಷ್ಟೋ ಮಂದಿ ಮರೆತುಬಿಟ್ಟಿದ್ದಾರೆ. ಆದರೆ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಸದ್ಯಕ್ಕಂತೂ ಪೆನ್ನೇ ಅನಿವಾರ್ಯ ಆಗಿರುವುದರಿಂದ ಕಷ್ಟಪಟ್ಟು ಕೈಯಲ್ಲಿ ಬರೆಯುವ ಪರಿಸ್ಥಿತಿ ಇದೆ. ಇದು ಇನ್ಯಾವಾಗ ಮಾಯವಾಗುತ್ತೋ ಗೊತ್ತಿಲ್ಲ. ಹೋಮ್​ವರ್ಕ್​ ಕೂಡ ಪಿಡಿಎಫ್​ ರೂಪದಲ್ಲಿ ವಾಟ್ಸ್​ಆ್ಯಪ್​ನಲ್ಲಿಯೇ ಕಳುಹಿಸುವ ಹಲವು ಶಾಲೆಗಳು ಇರುವುದರಿಂದ ಹೋಮ್​ವರ್ಕ್​ ಕೂಡ ಕೈಬರಹ ಬರೆಯದ ಸ್ಥಿತಿಯಲ್ಲಿ ನಮ್ಮ ಮಕ್ಕಳಿದ್ದಾರೆ. ಇದರ ಮಧ್ಯೆ ಸುಂದರ ಹ್ಯಾಂಡ್​ರೈಟಿಂಗ್​ ಎನ್ನುವ ಕಲ್ಪನೆಯೇ ದೂರವಾಗಿದೆ. ಕೈಯಲ್ಲಿ ಬರೆಯಲು ಬಂದರೆ ಸಾಕು ಎನ್ನುವ ಸ್ಥಿತಿ ನಿರ್ಮಾಣವಾಗಿದೆ.

ಆದರೆ ಇಲ್ಲೊಬ್ಬ 17 ವರ್ಷದ ಬಾಲಕಿ ಈಗ ಕೈಬರಹದಿಂದ ಸಕತ್​ ಫೇಮಸ್​ ಆಗಿದ್ದಾರೆ. ಖ್ಯಾತಿ ಗಳಿಸಿರುವುದು ಮಾತ್ರವಲ್ಲದೇ, ಪ್ರಪಂಚದ  ಅತಿ ಸುಂದರ ಕೈಬರಹಗಾರ್ತಿ ಎನ್ನುವ ಬಿರುದನ್ನು ಕೂಡ ಪಡೆದುಕೊಂಡಿದ್ದಾರೆ. ಇವರ ಹೆಸರು ಪ್ರಕೃತಿ ಮಲ್ಲಾ. ನೇಪಾಳ ಮೂಲದ ಈ ಯುವತಿ ಈಗ ಕೈಬರದಿಂದಾಗಿ ಫೇಮಸ್​ ಆಗಿದ್ದಾರೆ. ಇವರ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಜಗತ್ತಿನ ಅತ್ಯಂತ ಸುಂದರ ಹ್ಯಾಂಡ್​ರೈಟರ್​ ಎನ್ನುವ ಕೀರ್ತಿ ಇವರ ಪಾಲಿಗೆ ಬಂದಿದೆ. 

ಪ್ರಕೃತಿ ಅವರು, ಹೈಸ್ಕೂಲ್​ನಲ್ಲಿ ಇದ್ದಾಗಲೇ ಅಂದರೆ, 8ನೇ ತರಗತಿಯಲ್ಲಿದ್ದಾಗ ಅವರ ಕೈಬರಹ ಸದ್ದು ಮಾಡಿತ್ತು. ಅವರು ಬರೆದ ಒಂದು ಲೇಖನ ಕೈಬರಹದಿಂದಾಗಿ ಖ್ಯಾತಿ ಪಡೆದಿತ್ತು. ಆಗಲೇ ಅವರು ದೊಡ್ಡಮಟ್ಟದಲ್ಲಿ ಹೆಸರು ಕೂಡ ಮಾಡಿದ್ದರು. ಇದೀಗ ಅವರನ್ನು ಮೀರಿಸುವವರು ಯಾರೂ ಇಲ್ಲವಾಗಿದೆ.  

ಯುನೈಟೆಡ್​ ಅರಬ್ ಎಮಿರೆಟ್ಸ್​ನ 51ನೇ ಸ್ಪಿರಿಟ್ ಆಫ್​ ಯುನಿಯನ್​ ವಿಶೇಷ ಸಂದರ್ಭಕ್ಕೆ ಶುಭಾಶಯಗಳನ್ನು ತನ್ನ ಕೈ ಬರಹದ ಪ್ರಕೃತಿ ಬರೆದ ಪತ್ರವನ್ನು ಯುಎಇ ರಾಯಭಾರಿ ಕಚೇರಿಗೆ ನೀಡಲಾಗಿತ್ತು. ಆ ಫೋಟೋಗಳು ಈಗ ಪುನಃ ವೈರಲ್​ ಆಗುತ್ತಿವೆ. ಪ್ರಕೃತಿ ಅವರಿಗೆ  ನೇಪಾಳದ ಸಶಸ್ತ್ರ ಪಡೆಯಿಂದ ಸನ್ಮಾನ ಕೂಡ ಸಿಕ್ಕಿದೆ. 


Share with

Leave a Reply

Your email address will not be published. Required fields are marked *