ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಕ್ಯಾಬಿನೆಟ್‌ನಲ್ಲಿ ಜಮೀರ್ ಅಹ್ಮದ್ ಅವರೇ ನಂಬರ್-1 ಸಚಿವರಂತೆ. ಹೀಗಂತ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಹೇಳಿದ್ದಾರೆ ಎಂದು ಜಮೀರ್ ತಿಳಿಸಿದ್ದಾರೆ.

‘ಸುರ್ಜೇವಾಲಾ ಯಾರಿಗೂ ಖುಷಿಪಡಿಸುವಂತೆ ಮಾತನಾಡುವವರು ಅಲ್ಲ. ನನ್ನನ್ನು ನಂಬರ್-1 ಸಚಿವ ಅಂತ ಹೊಗಳಿದ್ದಾರೆ. ಹೀಗೆ ಬಹುಮಾನದ ರೀತಿಯಲ್ಲಿ ನನಗೆ ಮೆಚ್ಚುಗೆ ನೀಡಿರುವುದು ನನಗೆ ಖುಷಿ ತಂದಿದೆ’ ಎಂದಿದ್ದಾರೆ. ಕಾಂಗ್ರೆಸ್ ಶಾಸಕ ದೂರು-ದುಮ್ಮಾನಗಳನ್ನು ಸುರ್ಜೇವಾಲಾ ಆಲಿಸಿದ್ದರು.