ಇದೆಂಥಾ ಅಮಾನುಷ ಕೃತ್ಯ! ವಿಡಿಯೋ ನೋಡಿ

Share with

ವ್ಯಕ್ತಿಯೋರ್ವ ನಾಯಿಯನ್ನು ಬೈಕಿನ ಹಿಂಬದಿಗೆ ಚೈನ್‌ನಿಂದ ಕಟ್ಟಿ ಎಳೆದೊಯ್ದ ಘಟನೆ ಉಡುಪಿಯ ಬೈಂದೂರು ತಾಲೂಕಿನಲ್ಲಿ ನಡೆದಿದೆ.

ಈ ಘಟನೆಯ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತನ್ನ ಸಾಕು ನಾಯಿಯನ್ನು ಈ ವ್ಯಕ್ತಿ ತನ್ನ ಬೈಕಿಗೆ ಸರಪಳಿಯಿಂದ ಕಟ್ಟಿ ಎಳೆದೊಯ್ದಿದ್ದಾನೆ.

ಈ ದೃಶ್ಯ ಕಂಡು ಸಾರ್ವಜನಿಕರು ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಘಟನೆಯ ಬಗ್ಗೆ ಬೈಂದೂರು ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.


Share with