ಬದುಕು (life) ಹೊಡೆತಗಳ ಮೇಲೆ ಹೊಡೆತಗಳನ್ನು ನೀಡಬಲ್ಲದು. ಎದ್ದು ನಿಲ್ಲದಂತೆ ಮಾಡಿ ಬಿಡಬಹುದು. ಆದರೆ ಇದೆಲ್ಲದರ ನಡುವೆ ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳುವುದಕ್ಕೂ ಧೈರ್ಯ ಬೇಕು. ಇದಕ್ಕೆ ಉದಾಹರಣೆಯಂತಿದ್ದಾರೆ ಈ ವ್ಯಕ್ತಿ. ತನ್ನ ಎರಡು ಕಾಲುಗಳು ಸ್ವಾಧೀನ ಕಳೆದುಕೊಂಡು ದೈಹಿಕ ನ್ಯೂನತೆಯನ್ನು ಎದುರಿಸುತ್ತಿರುವ ಈ ವ್ಯಕ್ತಿಯ ಹೆಸರು ಪ್ರಕಾಶ್ (Prakash). ಆದರೆ ತನ್ನೆಲ್ಲಾ ನ್ಯೂನತೆಯನ್ನು ಬದಿಗಿಟ್ಟು ಜೀವನಕ್ಕಾಗಿ ಅವಲಂಬಿಸಿಕೊಂಡಿದ್ದು ಆಟೋ ಓಡಿಸುವ ಕಾಯಕ. ಕಾಯಕದಲ್ಲಿ ಶ್ರದ್ಧೆ, ನಗುವಿನಿಂದಲೇ ಎಲ್ಲವನ್ನು ಗೆಲ್ಲುವ ಛಲ ಹೊಂದಿರುವ ಈ ಆಟೋ ಚಾಲಕನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕಲಾವತಿ ಬಸವರಾಜ್(Kalavati basavaraj) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ದೈಹಿಕ ನ್ಯೂನತೆಯನ್ನು ಮೆಟ್ಟಿ ನಿಂತು ಜೀವನ ನಿರ್ವಹಣೆಗಾಗಿ ಆಟೋ ಓಡಿಸುತ್ತಿರುವ ವ್ಯಕ್ತಿಯನ್ನು ಕಾಣಬಹುದು. ಈ ವ್ಯಕ್ತಿಯ ಆತ್ಮವಿಶ್ವಾಸ, ಮುಖದಲ್ಲಿನ ನಗುವು ಬದುಕಿನಲ್ಲಿ ಗೆದ್ದೇ ಗೆಲ್ಲುವೆ ಎನ್ನುವುದನ್ನು ಸಾರಿ ಹೇಳುವಂತಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
ಈ ವಿಡಿಯೋ ಐವತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಿಮಗೆ ನಮ್ಮದೊಂದು ಸಲಾಂ ಎಂದಿದ್ದಾರೆ. ಮತ್ತೊಬ್ಬರು, ದೇವರು ಒಳ್ಳೇದು ಮಾಡಲಿ ಎಂದು ಹೇಳಿದ್ದಾರೆ. ಇನ್ನೊಬ್ಬರು, ಯುವಪೀಳಿಗೆಗೆ ಮಾದರಿ ಎಂದು ಕಾಮೆಂಟ್ ಮಾಡಿದ್ದಾರೆ.




