ಕಂಪನಿ ನನ್ನನ್ನು ನಡೆಸಿಕೊಂಡ ರೀತಿ ಇದು; ಟಾಯ್ಲೆಟ್ ಪೇಪರ್‌ನಲ್ಲಿ ರಾಜೀನಾಮೆ ಪತ್ರ ಬರೆದು ಉದ್ಯೋಗ ತೊರೆದ ವ್ಯಕ್ತಿ

Share with

ಕಂಪನಿಯಲ್ಲಿ (company) ಕೆಲಸ ಮಾಡುವ ಉದ್ಯೋಗಿಗಳನ್ನು ಒತ್ತಡವು ಬೆಂಬಿಡದೆ ಕಾಡುತ್ತದೆ. ಅನೇಕ ಬಾರಿ ಕಂಪನಿಗಳು ಉದ್ಯೋಗಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತವೆ. ಹೀಗಾಗಿ ರಾಜೀನಾಮೆ (resignation) ನೀಡುವ ನಿರ್ಧಾರಕ್ಕೆ ಬರುತ್ತಾರೆ. ಇದೀಗ ರಾಜೀನಾಮೆ ಪತ್ರವೊಂದು ವೈರಲ್ ಆಗಿದೆ. ಉದ್ಯೋಗಿಯೂ ಟಾಯ್ಲೆಟ್ ಪೇಪರ್‌ನಲ್ಲಿ ರಾಜೀನಾಮೆ ನೀಡಿರುವುದೇ ಹೈಲೈಟ್ ಆಗಲು ಮುಖ್ಯ ಕಾರಣ. ಅದಲ್ಲದೇ, ತಾನು ಯಾವ ಕಾರಣಕ್ಕಾಗಿ ಈ ಪೇಪರ್ ಬಳಸಿದ್ದೇನೆ ಎನ್ನುವುದನ್ನು ರಾಜೀನಾಮೆಯಲ್ಲಿ ಉಲ್ಲೇಖಿಸಾಲಾಗಿದೆ. ಈ ರಾಜೀನಾಮೆ ಪತ್ರ ನೋಡಿ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.

ವೋಟ್ಪಿಸ್ಮಿಕ್‌ (Whotfismick) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಉದ್ಯೋಗಿಯು ಟಾಯ್ಲೆಟ್ ಪೇಪರ್‌ನಲ್ಲಿ ರಾಜೀನಾಮೆ ಪತ್ರ ಬರೆದಿರುವುದನ್ನು ಕಾಣಬಹುದು. ಕಂಪನಿ ನನ್ನನ್ನು ಹೇಗೆ ನಡೆಸಿಕೊಂಡಿತು ಎಂಬುದರ ಸಂಕೇತವಾಗಿ ನಾನು ಈ ಟಾಯ್ಲೆಟ್ ಪೇಪರ್‌ರನ್ನು ನನ್ನ ರಾಜೀನಾಮೆ ಪತ್ರ ಬರೆಯಲು ಆರಿಸಿಕೊಂಡೆ. ನಾನು ಈ ಕೆಲಸವನ್ನು ತ್ಯಜಿಸುತ್ತೇನೆ ಎಂದು ಉಲ್ಲೇಖಿಸಿರುವುದನ್ನು ನೋಡಬಹುದು.

ವೈರಲ್ ಪೋಸ್ಟ್ ಇಲ್ಲಿದೆ


ಡಿಸೆಂಬರ್ 23 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 1.6 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಈ ವ್ಯಕ್ತಿಯೂ ಕಂಪನಿ ನಡೆಸಿಕೊಂಡ ರೀತಿ ತೀರಾ ವೈಯುಕ್ತಿಕವಾಗಿ ತೆಗೆದುಕೊಂಡ ಎನಿಸುತ್ತಿದೆ ಎಂದಿದ್ದಾರೆ. ಇನ್ನೊಬ್ಬರು, ಕಂಪನಿಗೆ ಮುಟ್ಟಿಕೊಳ್ಳುವಂತಹ ಉತ್ತರ ನೀಡಿದ ಉದ್ಯೋಗಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಅತ್ಯದ್ಭುತ ಪ್ರತಿಭೆ ಎಂದು ಹೇಳಿದ್ದಾರೆ.


Share with

Leave a Reply

Your email address will not be published. Required fields are marked *