ಪ್ಯಾರಸಿಟಮಾಲ್ ಮಾತ್ರೆ ಸೇವಿಸುವವರೇ ಎಚ್ಚರ..

Share with

ಇತ್ತೀಚಿನ ದಿನಗಳಲ್ಲಿ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗೆ ಪ್ಯಾರಸಿಟಮಾಲ್ ಮಾತ್ರೆ ತೆಗೆದುಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಇದರ ಸೇವನೆಯಿಂದ ನಿಮ್ಮ ಹೃದಯ ಹಾಗೂ ಯಕೃತ್ತು ಹಾನಿಗೊಳ್ಳುತ್ತದೆ ಎಂದು ಸಂಶೋಧನೆಯಿಂದ ತಜ್ಞರು ಕಂಡುಹಿಡಿದಿದ್ದಾರೆ. ಅಲ್ಲದೇ ಇದು ನಿಮ್ಮ ರಕ್ತದೊತ್ತಡವನ್ನು ಹೆಚ್ಚಿಸಬಹುದು. ಈ ಮಾತ್ರೆಯ ಹೆಚ್ಚಿನ ಪ್ರಮಾಣದ ಬಳಕೆಯಿಂದ ಆಕ್ಸಿಡೇಟಿವ್ ಒತ್ತಡ ಅಥವಾ ಜೀವಾಣುಗಳ ಸಂಗ್ರಹದ ಪರಿಣಾಮವಾಗಿ ಹೃದಯ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

ಪ್ಯಾರಸಿಟಮಾಲ್ ಮಾತ್ರೆ ತೆಗೆದುಕೊಳ್ಳುವುದರಿಂದ ನಮ್ಮ ದೇಹಕ್ಕೆ ಇಷ್ಟೆಲ್ಲಾ ಅಪಾಯಗಳಿವೆ ಎಂದು ಸಂಶೋಧಕರು ತಿಳಿಸಿದ್ದಾರೆ. ಆದರೆ ಇದರ ಮಿತವಾದ ಬಳಕೆಯಿಂದ ಈ ಪರಿಣಾಮಗಳು ಬೀರುವುದಿಲ್ಲ ಎನ್ನಲಾಗಿದೆ.

ರಾಷ್ಟ್ರೀಯ ಆರೋಗ್ಯ ಸೇವೆ (NHS) ವರದಿ ಪ್ರಕಾರ, ವಯಸ್ಕರು 500mg ಮಾತ್ರೆಗಳನ್ನು ದಿನಕ್ಕೆ 4 ಬಾರಿ ತೆಗೆದುಕೊಳ್ಳಬಹುದು. ಆದರೆ ಡೋಸ್‌ಗಳ ನಡುವೆ ಕನಿಷ್ಠ 4 ಗಂಟೆಗಳ ಕಾಲ ಅಂತರವಿರಬೇಕು. 24 ಗಂಟೆಗಳಲ್ಲಿ 8 ಕ್ಕಿಂತ ಹೆಚ್ಚು ಮಾತ್ರೆಗಳನ್ನು ತೆಗೆದುಕೊಳ್ಳಬಾರದು ಎಂದು ತಿಳಿಸಿದೆ.


Share with

Leave a Reply

Your email address will not be published. Required fields are marked *