ವಿಟ್ಲ :ಧಾರ್ಮಿಕ ಶ್ರದ್ದಾ ಕೇಂದ್ರಕ್ಕೆ ಸಂಬಂಧಿಸಿದ ಕಾಣಿಕೆ ಕಟ್ಟೆಯನ್ನು ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ದೇಲಂತ ಬೆಟ್ಟು ಶಾಲಾ ಪಕ್ಕದ ರಸ್ತೆಯ ಬದಿಯಲ್ಲಿ ಹಾಗೂ ದೇಲಂತಬೆಟ್ಟು ಚರ್ಚಿನ ಕೆಳಗಡೆ ರಸ್ತೆಯ ಬದಿಯಲ್ಲಿ ಅಳವಡಿಸಿದ್ದು, ಕಾಣಿಕೆ ಕಟ್ಟೆಗಳಲ್ಲಿ ಸಂಗ್ರವಾಗುವ ಹಣವನ್ನು ತೆಗೆಯಲು ದಿನಾಂಕ:26-07-2025 ರಂದು ಸದ್ರಿ ಸ್ಥಳಗಳಿಗೆ ತೆರಳಿದಾಗ, ಯಾರೋ ಕಳ್ಳರು ಎರಡೂ ಕಾಣಿಕೆ ಕಟ್ಟೆಗಳ ಬೀಗವನ್ನು ಒಡೆದು ಸುಮಾರು 12,000/- ರೂ ನಿಂದ 15,000/- ರೂ ಹಣವನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ.

ಈ ಬಗ್ಗೆ ಬಂಟ್ವಾಳ ತಾಲೂಕಿನ ದೇಲಂತಬೆಟ್ಟು, ಕನ್ಯಾನ ನಿವಾಸಿಡಿ.ನಾರಾಯಣ ರಾವ್ ಪ್ರಾಯ (72) ಎಂಬವರು ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.
ಸದ್ರಿ ಪ್ರಕರಣವನ್ನು ತನಿಖೆ ನಡೆಸಲಾಗಿ ಆರೋಪಿತರಾದ 1)ತ್ವಾಹಿದ್ ಪ್ರಾಯ 19 ವರ್ಷ, ವಾಸ:ವಿಟ್ಲ ಕಸಬಾ ಗ್ರಾಮ, ಬಂಟ್ವಾಳ 2)ಉಮ್ಮರ್ ಫಾರೂಕ್ (18), ವಾಸ:ವಿಟ್ಲ ಕಸಬಾ ಗ್ರಾಮ, ಬಂಟ್ವಾಳ 3)ಮೊಹಮ್ಮದ್ ನಬೀಲ್, ಪ್ರಾಯ 18 ವರ್ಷ, ವಾಸ:ವಿಟ್ಲ ಕಸಬಾ ಗ್ರಾಮ, ಬಂಟ್ವಾಳ ಎಂಬವರುಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.




