ಕಾಸರಗೋಡು: ವಲಿಯಪರಂಬ ಬೀಚ್ ಪರಿಸರದಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 26 ಗ್ರಾಮ್ ಎಂಡಿಎಂ ಅನ್ನು ಪೊಲೀಸರು ಎಂ.ಟಿ.ಪಿ.ಮರ್ಷಾದ್(29), ಮುಹಮ್ಮದ್ ಸಫಾನ್(28) ಮತ್ತು ಮುಹಮ್ಮದ್ ಶಿಯಾಸ್(31)ನನ್ನು ಬಂಧಿಸಿದ್ದಾರೆ.

ಕಾರು ಚಾಲಕ ಅರ್ಷಾದ್ ಪರಾರಿಯಾಗಿದ್ದಾನೆ. ಎಂಡಿಎಂಎಯನ್ನು ಬೆಂಗಳೂರಿನಿಂದ ಮಾರಾಟಕ್ಕೆಂದು ತರಲಾಗಿತ್ತು ಎಂದು ವಿಚಾರಣೆ ವೇಳೆ ಆರೋಪಿಗಳು ತಿಳಿಸಿದ್ದಾರೆ.




