ಬೈಂದೂರು: ಯಡ್ತರೆ ಜಂಕ್ಷನ್ ಬಳಿ ಜೂ.5ರಂದು ಬೆಳಗಿನ ಜಾವ ಅಕ್ರಮವಾಗಿ ಲಾರಿಯಲ್ಲಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಭಟ್ಕಳದ ನವಾಯತ್ ಕಾಲೋನಿಯ ಅಬ್ರಾರುಲ್ ಹಾಕ್ ಮೋಮಿನ್(30), ಭಟ್ಕಳ ಕೋಗ್ತಿಯ ಮೊಹಮ್ಮದ್, ಭಟ್ಕಳ ಜಾಲಿಯ ಮೊಹಮ್ಮದ್ ಆರೀಫ್ ಎಂದು ಗುರುತಿಸಲಾಗಿದೆ.

ಇವರು ಕೊಲ್ಲೂರು ಕಡೆಯಿಂದ ಭಟ್ಕಳ ಕಡೆಗೆ ಲಾರಿಯಲ್ಲಿ ಅಕ್ರಮವಾಗಿ 10 ಜಾನುವಾರುಗಳನ್ನು ಮಾಂಸಕ್ಕಾಗಿ ಬೆಂಗಾವಲು ವಾಹನ ಕಾರಿನೊಂದಿಗೆ ಸಾಗಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು, 10 ಜಾನುವಾರುಗಳನ್ನು ರಕ್ಷಿಸಿ, ಮೂವರನ್ನು ಮತ್ತು ಲಾರಿ ಹಾಗೂ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ