
ಮಸಾಲೆ ದೋಸೆ ತಿಂದ ಮೂರು ವರ್ಷದ ಬಾಲಕಿ ಸಾವಿಗೀಡಾಗಿದ್ದಾಳೆ. ತ್ರಿಶೂರ್‌ನ ವೆಂಡರ್‌ನಲ್ಲಿ ಈ ಘಟನೆ ನಡೆದಿದ್ದು, ಫುಡ್‌ಪಾಯಿಸನ್ ಕಾರಣ ಎಂದು ಶಂಕೆ ವ್ಯಕ್ತವಾಗಿದೆ.ತ್ರಿಶೂರ್‌ನ ವೆಂಟರ್ನ ಅಲಗಪ್ಪ ಮೈದಾನದ ಬಳಿಯ ಕಲ್ಲುಕರನ್ ಹೆನ್ರಿ ಅವರ ಪುತ್ರಿ ಒಲಿವಿಯಾ ಮೃತ ಬಾಲಕಿ.
ವಿದೇಶದಲ್ಲಿದ್ದ ಒಲಿವಿಯಾ ತಂದೆ, ಶನಿವಾರ ನೆಡುಂಬಸ್ಸೆರಿ ತಲ್ಲುಪಿದ್ದರು. ಹೆನ್ರಿಯನ್ನು ಕರೆದೊಯ್ಯಲು ಕುಟುಂಬದ ಜೊತೆ ಬಾಲಕಿ ಕೂಡಾ ಇದ್ದಳು. ಮನೆಗೆ ಹಿಂದಿರುಗುವ ಸಂದರ್ಭದಲ್ಲಿ ಹೆನ್ರಿ, ತನ್ನ ಪತ್ನಿ, ತಾಯಿ, ಒಲಿವಿಯಾ ಅಂಗಮಾಲಿಯ ಒಂದು ಹೋಟೆಲ್‌ನಲ್ಲಿ ಊಟ ಮಾಡಿದರು. ಮಸಾಲೆ ದೋಸೆ ತಿಂದ ಮೂರು ವರ್ಷದ ಬಾಲಕಿಗೆ ಕೂಡಲೇ ಅಸ್ವಸ್ಥತೆ ಕಾಡಿದೆ.ಆಕೆಯನ್ನು ಓಲ್ಲೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಸೋಮವಾರ ಬೆಳಗ್ಗೆ ಮಗುವಿನ ಆರೋಗ್ಯ ಸ್ಥಿತಿ ಹದಗೆಟ್ಟಿತು. ನಂತರ ಮಗುವನ್ನು ಪುತ್ತೂರು ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತ ಹೊಂದಿದ್ದಾಳೆ