ಮಂಗಳೂರು: ನೀರಿಗಿಳಿದ ಮೂವರು ಯುವಕರು ನೀರು ಪಾಲಾದ ಘಟನೆ ಮಾ.3ರಂದು ಸಂಜೆ ಪಣಂಬೂರ್ ಬೀಚ್ ನಲ್ಲಿ ನಡೆದಿದೆ. ನೀರುಪಾಲಾದ ಯುವಕರನ್ನು ಮಿಲನ್ (20), ಲಿಖಿತ್ (18) ಮತ್ತು ನಾಗರಾಜ್ (24) ಎಂದು ಗುರುತಿಸಲಾಗಿದೆ.
ನೀರುಪಾಲಾದ ಯುವಕರ ಪೈಕಿ ಮಿಲನ್ ಅವರು ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದರು. ಲಿಖಿತ್ ಅವರು ಕೈಕಂಬದ ಖಾಸಗಿ ಕಾಲೇಜಿನ ಪಿಯುಸಿ ವಿದ್ಯಾರ್ಥಿಯಾಗಿದ್ದರೆ, ನಾಗರಾಜ್ ಅವರು ಬೈಕಂಪಾಡಿಯ ಖಾಸಗಿ ಕಂಪನಿಯೊಂದರಲ್ಲಿ ಸೂಪರ್‌ವೈಸರ್ ಆಗಿದ್ದರು ಎನ್ನಲಾಗಿದೆ.
ಸ್ಥಳಕ್ಕೆ ಪಣಂಬೂರು ಪೊಲೀಸರು ಭೇಟಿ ನೀಡಿದ್ದು, ನೀರು ಪಾಲಾದ ಯುವಕರ ಶೋಧ ಕಾರ್ಯ ನಡೆದಿದೆ.