ಮಂಗಳೂರು: ಮಂಗಳೂರಿನ ಕೆ.ಎಸ್ ರಾವ್ ರಸ್ತೆಯಲ್ಲಿ ವಿವಿಧ ಕಸರತ್ತು ಪ್ರದರ್ಶಿಸುತ್ತಿದ್ದ ಹುಲಿವೇಷಧಾರಿಗಳ ತಂಡ ಮೆರವಣಿಗೆ ಹೋಗುತ್ತಿದ್ದಾಗ ವೇಷಧಾರಿಯೊಬ್ಬರ ಟೋಪಿಗೆ ಬೆಂಕಿ ಹತ್ತಿಕೊಂಡ ಘಟನೆ ವರದಿಯಾಗಿದೆ. ಜಿಲ್ಲೆಯಾದ್ಯಂತ ಅನೇಕ ಕಡೆಗಳಲ್ಲಿ ಹುಲಿ ಕುಣಿತ ಸೇರಿದಂತೆ ವಿಜೃಂಭಣೆಯಿಂದ ದಸರಾ, ನವರಾತ್ರಿಯನ್ನು ಆಚರಿಸಲಾಗಿದೆ. ಈ ಮಧ್ಯೆ ಅಲ್ಲಲ್ಲಿ ಹುಲಿ ವೇಷಧಾರಿಗಳಿಗೆ ಆವೇಷ ಬಂದ ಘಟನೆಗಳು ವರದಿಯಾಗಿದೆ.
ಇದರ ಜೊತೆಗೆ ಮತ್ತೊಂದು ಘಟನೆ ನಡೆದಿದ್ದು, ಮಂಗಳೂರಿನ ಕೆ.ಎಸ್ ರಾವ್ ರಸ್ತೆಯಲ್ಲಿ ವಿವಿಧ ಕಸರತ್ತು ಪ್ರದರ್ಶಿಸುತ್ತಿದ್ದ ಹುಲಿವೇಷಧಾರಿಗಳ ತಂಡ ಮೆರವಣಿಗೆ ಹೋಗುತ್ತಿದ್ದಾಗ ವೇಷಧಾರಿಯೊಬ್ಬರು ಬೆಂಕಿ ಸಾಹಸ ಮಾಡಲು ಮುಂದಾಗಿದ್ದಾರೆ. ಹುಲಿ ವೇಷಧಾರಿ ಬಾಯಿಯಿಂದ ಬೆಂಕಿ ಉಗುಳುವ ಸಾಹಸ ಮಾಡುತ್ತಿದ್ದಂತೆಯೇ ಅವರ ಟೋಪಿಗೆ ಧಗ್ಗನೆ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಅವರು ಟೋಪಿಯನ್ನು ಕಿತ್ತೆಸೆದು ಮೈಗೆ ಬೆಂಕಿ ತಗುಲದಂತೆ ನೋಡಿಕೊಂಡಿದ್ದು, ಹುಲಿ ವೇಷಧಾರಿಯ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.