ಮಂಜೇಶ್ವರ: ಅರಿಬೈಲಿನಲ್ಲಿ ಪ್ಲಾಸ್ಟಿಕ್ ಹೊತ್ತಿಕೊಂಡು ಹೋಗುತ್ತಿದ್ದ ಟಿಪ್ಪರ್ ಲಾರಿಯೊಂದು ಕಂದಕಕ್ಕೆ ಉರುಳಿ ಬಿದ್ದ ಘಟನೆ ಜುಲೈ 22 ರಂದು ಸಂಜೆ ವೇಳೆ ನಡೆದಿದೆ.
ಮಂಜೇಶ್ವರದಿಂದ ಬಟ್ಟಿಪದವಿಗೆ ಹೋಗುತ್ತಿದ್ದ ಟಿಪ್ಪರ್ ಲಾರಿ ರಸ್ತೆಯಿಂದ ಉರುಳಿ ಕಂದಕಕ್ಕೆ ಉರುಳಿ ಬಿದ್ದಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.