ಯುವತಿ ಕಿರುಕುಳ ತಾಳಲಾರದೆ ಯುವಕನೊಬ್ಬ ಸೆಲ್ಫಿ ವಿಡಿಯೋ ಮಾಡಿ, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ದೊಡ್ಡಬಳ್ಳಾಪುರದ ರಾಜಘಟ್ಟ ಕೆರೆಯ ಬಳಿ ಘಟನೆ ನಡೆದಿದೆ. ಮಂಜುನಾಥ್ ಮೃತ ಯುವಕ. ನನ್ನ ಸಾವಿಗೆ ಗಗನ ಎಂಬ ಯುವತಿ ಕಾರಣ ಎಂದು ಹೇಳಿ ಜೂ 13ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆಕೆ ನಂಬಿಸಿ ಮೋಸ ಮಾಡಿದ್ದಾಳೆ. ಆಕೆಗೆ ಬೇರೋಬ್ಬನ ಜೊತೆಯಲ್ಲಿ ಸಂಬಂಧವಿತ್ತು ಎಂದಿದ್ದಾನೆ. ಮಂಜುನಾಥ್ ಕುಟುಂಬಸ್ಥರಿಂದ ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಗಗನ ಮೇಲೆ ದೂರು ನೀಡಲಾಗಿದೆ.