ರಾಗಿಂಗ್ ಬೇಸತ್ತು ಆರ್ಕಿಟೆಕ್ಚರ್ ವಿದ್ಯಾರ್ಥಿಯೋರ್ವ ಸೆಲ್ಸಿ ವಿಡಿಯೋ ಮಾಡಿ, ನೇಣಿಗೆ ಶರಣಾದ ಘಟನೆ ಬೆಂಗಳೂರಿನ ಮಾದನಾಯಕನಹಳ್ಳಿಯ ನಂದರಾಮಯ್ಯನ ಪಾಳ್ಯದಲ್ಲಿ ನಡೆದಿದೆ.
ಹಾಸನದ ಅರುಣ್ (22) ಮೃತ ವಿದ್ಯಾರ್ಥಿ. ಕಾಲೇಜಿಗೆ ಟಾಪರ್ ಆಗಿದ್ದ ಅರುಣ್, ಕಾಲೇಜಿನಲ್ಲಿ ನಡೆಯುವ ರ್ಯಾಗಿಂಗ್‌ನ್ನು ಉಲ್ಲೇಖಿಸಿ 5 ನಿಮಿಷದ ವಿಡಿಯೋ ಮಾಡಿ, ಅದನ್ನು ಕಾಲೇಜಿನ ಗ್ರೂಪ್‌ಗೆ ಶೇರ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.