ಇಂದು ಶ್ರೀ ಹೊಳೆಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ನವಗ್ರಹ ಪುನಃ ಪ್ರತಿಷ್ಠಾಪನಾ ಅಷ್ಟಬಂಧ ಕಾರ್ಯಕ್ರಮ

Share with

ಸಕಲೇಶಪುರ : ಶ್ರೀ ಹೊಳೆಮಲ್ಲೇಶ್ವರ  ಸ್ವಾಮಿ ದೇವಸ್ಥಾನದ ಟ್ರಸ್ಟ್( ರಿ) ಸಮಿತಿಯ ವತಿಯಿಂದ ಶ್ರೀ ಹೊಳೆ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ  ದಿನಾಂಕ 12-6-2025ನೇ ಗುರುವಾರ.

ಬೆಳಿಗ್ಗೆ 7-00ಕ್ಕೆ ಪ್ರತಿಷ್ಠಾಂಗ ಹೋಮ, ಕಲಾವೃದ್ಧಿ ಹೋಮ, ಬೆಳಿಗ್ಗೆ 10-50ಕ್ಕೆ ಶುಭ ಸಿಂಹ ಲಗ್ನದಲ್ಲಿ ನವಗ್ರಹ ದೇವರುಗಳ ಪ್ರಾಣಪ್ರತಿಷ್ಠೆ, ಜೀವಕಲಶಾಭಿಷೇಕ ನಂತರ ನವಗ್ರಹ ಹೋಮ, ನವಗ್ರಹ ಮೂಲ ಮಂತ್ರ ಹೋಮ, ಪೂರ್ಣಾಹುತಿ, ಮಧ್ಯಾಹ್ನ 1-00 ಗಂಟೆಗೆ ಮಹಾಪೂಜೆ, ಮಹಾಮಂಗಳಾರತಿ , ನಂತರ ಮಹಾಅನ್ನಸಂತರ್ಪಣೆ ನಡೆಯಲಿದ್ದು. ಸಮಸ್ತ ಭಕ್ತಾಧಿಗಳು ಅತಿಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ದೇವಸ್ಥಾನದ  ಸಮಿತಿಯವರು ತಿಳಿಸಿದ್ದಾರೆ.


Share with

Tags:

Leave a Reply

Your email address will not be published. Required fields are marked *