ನಾಳೆ ವರ್ಷದ ಮೊದಲ ಚಂದ್ರಗ್ರಹಣ: ಎಷ್ಟು ಹೊತ್ತು ಕಾಣುತ್ತೆ?

Share with

ಈ ವರ್ಷದ ಮೊದಲ ಚಂದ್ರಗ್ರಹಣವು ಮಾರ್ಚ್ ತಿಂಗಳ ಆರಂಭದಲ್ಲೇ ಸಂಭವಿಸಲಿದೆ. ಹೋಳಿ ಹುಣ್ಣಿಮೆ ದಿನ ಮಾರ್ಚ್ 3ರಂದು ಚಂದ್ರಗ್ರಹಣ ಸಂಭವಿಸಲಿದೆ. ದೀರ್ಘ ಸಮಯದ ಚಂದ್ರಗ್ರಹಣ ಇದಾಗಿದ್ದು, ಸಿಂಹ ಮತ್ತು ಫಾಲ್ಗುಣಿ ನಕ್ಷತ್ರ ಪುಂಜದಲ್ಲಿ ಜರುಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚಂದ್ರನು ಸಿಂಹ ರಾಶಿಯಲ್ಲಿ ಬರುತ್ತದೆ. ಈ ರಾಶಿಯವರು ಹೆಚ್ಚು ಎಚ್ಚರಿಕೆ ವಹಿಸುವಂತೆಯೂ ಹೇಳಲಾಗಿದೆ. ಕಾಮ ದಹನವನ್ನು ಹೋಳಿ ಹುಣ್ಣಿಮೆ ಹಿಂದಿನ ದಿನ ಫಾಲ್ಗುಣಿ ಪೂರ್ಣಿಮೆಯಂದು ಆಚರಿಸಲಾಗುತ್ತದೆ. ಚಂದ್ರಗ್ರಹಣ ಹಿನ್ನೆಲೆಯಲ್ಲಿ ಕಾಮ ದಹನದ ಮಾಡಕೂಡದು ಅಂತಲೂ ಹೇಳಲಾಗಿದೆ. ಈ ಗ್ರಹಣ ಭಾರತದಲ್ಲಿ ಗೋಚಿಸುತ್ತದೆಯೇ? ಸಮಯ ಪೂರ್ಣ ಮಾಹಿತಿ ಇಲ್ಲಿದೆ.

2026ರ ಚಂದ್ರಗ್ರಹಣ ಸಮಯ ನೋಡುವುದಾದರೆ ಮಾರ್ಚ್ 3 ಮಂಗಳವಾರ ಮಧ್ಯಾಹ್ನ 3:20 ಕ್ಕೆ ಚಂದ್ರನಿಗೆ ಗ್ರಹಣ ಹಿಡಿಯಲು ಆರಂಭವಾಗುತ್ತದೆ. ಸಂಜೆ 6:47 ಕ್ಕೆ ಮುಕ್ತಾಯಗೊಳ್ಳುತ್ತದೆ. ಈ ಚಂದ್ರಗ್ರಹಣದ ಅವಧಿ 3 ಗಂಟೆ 27 ನಿಮಿಷಗಳಷ್ಟು ಸುದೀರ್ಘವಾಗಿರುತ್ತದೆ. ಒಟ್ಟು ಚಂದ್ರಗ್ರಹಣವು ಸಂಜೆ 4:34 ಕ್ಕೆ ಪ್ರಾರಂಭವಾಗುತ್ತದೆ.

ಭಾರತದಲ್ಲಿ ಚಂದ್ರಗ್ರಹಣ ಗೋಚರದ ಸಮಯ

ಭಾರತದಲ್ಲೂ ಚಂದ್ರಗ್ರಹಣವು ಗೋಚರಿಸುತ್ತದೆ. ಆ ದಿನ ಸಂಜೆ 6.22ಗಂಟೆಗೆ ಚಂದ್ರ ಗ್ರಹಣವನ್ನು ನೋಡಬಹುದಾಗಿದೆ. ಹುಣ್ಣಿಮೆ ಬೆಳದಿಂಗಳಲ್ಲಿ ಗೋಚರಿಸಲಿದೆ. ಸಂಜೆ 6:47ಕ್ಕೆ ಕೊನೆಗೊಳ್ಳುತ್ತದೆ. ಈ ಸಮಯದ ಪ್ರಕಾರ, ಭಾರತದಲ್ಲಿ ಚಂದ್ರಗ್ರಹಣವು ಕಡಿಮೆ ಸಮಯದವರೆಗೆ ಗೋಚರಿಸುತ್ತದೆ. ಒಟ್ಟು 25 ನಿಮಿಷಗಳಷ್ಟು ಕಾಲ ಚಂದ್ರನಿಗೆ ಗ್ರಹಣ ಹಿಡಿದಿರುವುದನ್ನು ಭಾರತೀಯರು ನೋಡಬಹುದಾಗಿದೆ. ಇದರಿಂದಾಗಿ ದೇಶದ ವಿವಿಧ ಕಡೆಗಳಲ್ಲಿ ಚಂದ್ರೋದಯದ ಸಮಯದಲ್ಲಿ ಬದಲಾವಣೆ ಆಗುವ ನಿರೀಕ್ಷೆ ಇದೆ.

ಈಗಾಗಲೇ ಚಂದ್ರನ ಪ್ರಭಾವದಲ್ಲಿರುವ ಸಿಂಹ ರಾಶಿಯಲ್ಲಿ ಜನಿಸಿದವರಿಗೆ ಎಚ್ಚರಿಕೆ ವಹಿಸಬೇಕು. ಮಾರ್ಚ್ ತಿಂಗಳು ಅವರ ಪಾಲಿಗೆ ಸವಾಲಿನ ತಿಂಗಳವಾಗಬಹುದೆಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಏನೇ ನಿರ್ಧಾರ ಕೈಗೊಳ್ಳಬೇಕಾದರೂ ಸಿಂಹ ರಾಶಿಯವರು ಎಚ್ಚರಿಕೆ ವಹಿಸುವಂತೆ ಜ್ಯೋತಿಷಿಗಳು ಶಿಫಾರಸು ಮಾಡಿದ್ದಾರೆ.


Share with

Leave a Reply

Your email address will not be published. Required fields are marked *