ನಾಳೆ ಮೋದಿ ಸರಕಾರಕ್ಕೆ 11 ವರ್ಷ ಪೂರ್ಣ; ದೇಶದಾದ್ಯಂತ ಅಭಿಯಾನ

Share with

ಏನೇನು ಕಾರ್ಯಕ್ರಮ?

ನವದೆಹಲಿ: ಪ್ರಧಾನಿ ಮೋದಿ ನಾಯಕತ್ವದ ಕೇಂದ್ರದ ಎನ್‌ಡಿಎ ಸರ್ಕಾರಕ್ಕೆ ಜೂ.9ರಂದು 11 ವರ್ಷಗಳು ಪೂರ್ಣಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ದೇಶಾದ್ಯಂತ “ಸಂಕಲ್ಪದಿಂದ ಸಿದ್ಧಿ’ ಅಭಿಯಾನಕ್ಕೆ ಸಿದ್ಧತೆ ನಡೆಸಿದೆ. ಜೂ.9ರಿಂದಲೇ ಇದು ಆರಂಭವಾಗಲಿದೆ. ಅಲ್ಲದೇ, ಸೋಮವಾರ ದೇಶಾದ್ಯಂತ ಪಕ್ಷವು ಸುದ್ದಿಗೋಷ್ಠಿಗಳನ್ನು ನಡೆಸಲಿದೆ.

ರಾಜ್ಯಮಟ್ಟದಲ್ಲಿ ಈ ಸುದ್ದಿಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದ್ದು, ಕೇಂದ್ರ ಸಚಿವರು, ಬಿಜೆಪಿ ವರಿಷ್ಠರು, ಹಿರಿಯ ನಾಯಕರು ಭಾಗಿಯಾಗಲಿದ್ದಾರೆ. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ದೆಹಲಿಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಎನ್ನಲಾಗಿದ್ದು, ಸುದ್ದಿಗೋಷ್ಠಿಗಳಲ್ಲಿ 11 ವರ್ಷಗಳ ಬಿಜೆಪಿಯ ಸಾಧನೆ ಕುರಿತು ಮಾಹಿತಿ ನೀಡಲಾಗುತ್ತದೆ. ಜತೆಗೆ ಸಾಮಾಜಿಕ ಮಾಧ್ಯಮಗಳಲ್ಲಿಯೂ ಈ ಬಗ್ಗೆ ಪ್ರಚಾರ ನಡೆಸಲು ಮುಂದಾಗಿರುವ ಬಿಜೆಪಿ, 11 ವರ್ಷಗಳಿಂದ ಮೋದಿ ಸರ್ಕಾರ ಮಾಡಿದ ಸಾಧನೆಗಳ ಹಲವಾರು ವಿಡಿಯೋ, ಪೋಸ್ಟ್‌ಗಳನ್ನು ಹಂಚಿಕೊಳ್ಳಲಿದೆ.

ಜನರಲ್ಲಿ ಜಾಗೃತಿ ಮೂಡಿಸಿ, ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಉತ್ತೇಜನ ನೀಡಲಾಗುತ್ತದೆ. ಜಿಲ್ಲಾ ಮಟ್ಟ, ವಲಯ ಮಟ್ಟದಲ್ಲಿ ಕಾರ್ಯಕರ್ತರೊಂದಿಗೆ “ಸಂಕಲ್ಪ ಸಭೆ’ ನಡೆಸಿ, ವಿಕಸಿತ ಭಾರತದ ಕಲ್ಪನೆಗೆ ಕಾರ್ಯಕರ್ತರು ಮಾಡಬೇಕಾದ ಕೆಲಸಗಳ ಬಗ್ಗೆ ಅಲ್ಲಿ ಚರ್ಚೆ ನಡೆಸಲಾಗುವುದು ಎನ್ನಲಾಗಿದೆ.

ಏನೇನು ಕಾರ್ಯಕ್ರಮ?

ದೇಶಾದ್ಯಂತ ಪ್ರಮುಖ ನಾಯಕರಿಂದ ಸುದ್ದಿಗೋಷ್ಠಿ

11 ವರ್ಷಗಳ ಸಾಧನೆ ಕುರಿತು ಮಾಹಿತಿ

ಸಾಮಾಜಿಕ ಮಾಧ್ಯಮಗಳಲ್ಲೂ ಈ ಕುರಿತ ವಿಡಿಯೋ

ಜಿಲ್ಲಾ, ವಲಯ ಮಟ್ಟದಲ್ಲಿ ಕಾರ್ಯಕರ್ತರ ಜತೆ ಸಂಕಲ್ಪ ಸಭೆ

ಕಾರ್ಯಕರ್ತರು ಮಾಡಬೇಕುದ ಕೆಲಸಗಳ ಬಗ್ಗೆ ಚರ್ಚೆ


Share with

Leave a Reply

Your email address will not be published. Required fields are marked *