ಕಾಸರಗೋಡು: 2023-24 ಸಮಗ್ರ ಶಿಕ್ಷ ಕಾಸರಗೋಡ್ ಬಿಆರ್ ಸಿ ಮಂಜೇಶ್ವರದ ನೇತೃತ್ವದಲ್ಲಿ ವಿಶೇಷ ಚೇತನ ಮಕ್ಕಳಿಗೆ ಪಿಲಿಕುಲ ನಿಸರ್ಗಧಾಮಕ್ಕೆ ಫೆ.28ರಂದು ಪ್ರವಾಸವನ್ನು ಕೈಗೊಂಡಿದ್ದರು.
ಪ್ರವಾಸದಲ್ಲಿ 44 ವಿಶೇಷ ಚೇತನ ಮಕ್ಕಳು, ಪೋಷಕರು, ವಿಶೇಷ ಚೇತನ ಶಿಕ್ಷಕರು ಮತ್ತು ಬಿ.ಆರ್.ಸಿ ಯ ಸಿಬ್ಬಂದಿ ಪಾಲ್ಗೊಂಡರು. ಮಂಜೇಶ್ವರ ಬಿ.ಆರ್.ಸಿ ಯ ಬಿ.ಪಿ.ಸಿ ಶ್ರೀ ಜೊಯ್ ಜಿ ಪ್ರವಾಸಕ್ಕೆ ಚಾಲನೆ ಕೊಟ್ಟು ಶುಭ ಹಾರೈಸಿದರು.
ತಮ್ಮ ಜೀವನ ದಲ್ಲಿ ಮೊತ್ತ ಮೊದಲನೆಯ ಬಾರಿಗೆ ಪಿಲಿಕುಲ ನಿಸರ್ಗಧಾಮದಲ್ಲಿ ಇರುವ ಅನೇಕ ಸ್ಥಳಗಳನ್ನು ವಿಶೇಷ ಚೇತನ ಮಕ್ಕಳು ಮತ್ತು ಹೆತ್ತವರು ಆನಂದಿಸಿ ಸಂಭ್ರಮಿಸಿದರು.