
ಉಪ್ಪಳ: ಸಂಕಕ್ಕೆ ನಿರ್ಮಿಸಲಾದ ಕಬ್ಬಿಣದ ತಡೆ ಬೇಲಿ ಮುರಿದು ವಾಹನ ಸಂಚಾರಕ್ಕೆ ಭೀತಿ ಉಂಟಾಗುತ್ತಿರುವುದಾಗಿ ದೂರಲಾಗಿದೆ. ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಬಳ್ಳೂರು-ಕನಿಯಾಲ ಲೋಕೋಪಯೋಗಿ ಇಲಾಖೆ ರಸ್ತೆಯ ಸುದೆಂಬಳದಲ್ಲಿ ಸಂಕ ಅಪಾಯದಂಚಿನಲ್ಲಿದೆ. ರಸ್ತೆ ಪೂರ್ತಿ ಅಗಲವಿದ್ದರೂ ಸಂಕಮಾತ್ರ ಕಿರಿದಾಗಿದೆ. ಸಂಕಕ್ಕೆ ಇಕ್ಕೆಡೆಗಳಲ್ಲಿ ಕಬ್ಬಿಣದ ತಡೆ ಬೇಲಿ ನಿರ್ಮಿಸಲಾಗಿದೆ. ಈ ಪೈಕಿ ಒಂದು ಭಾಗದ ತಡೆ ಬೇಲಿ ಹಾಗೂ ಕಾಂಕ್ರೀಟ್‌ನ ಭೀಮ್ ಮುರಿದು ಯಾವುದೆ ಕ್ಷಣದಲ್ಲಿ ಸಂಕ ಕುಸಿದು ಬೀಳುವ ಹಂತದಲ್ಲಿದ್ದು, ವಾಹನ ಸವಾರರಲ್ಲಿ ಆತಂಕ ಉಂಟಾಗಿದೆ. ಸಂಕದ ಮೂಲಕ ವರ್ಷಗಳ ಹಿಂದೆ ಘನ ಗಾತ್ರದ ವಾಹನ ಸಂಚರಿಸುವ ವೇಳೆ ಹಾನಿಗೀಡಾಗಿರುವುದಾಗಿ ಹೇಳಲಾಗುತ್ತಿದೆ. ಈ ರಸ್ತೆಯಿಂದ ಉಪ್ಪಳದಿಂದ ಮುಳಿಗದ್ದೆ, ಬಳ್ಳೂರು ದಾರಿಯಾಗಿ ಕನಿಯಾಲಕ್ಕೆ ಬಸ್ ಸಂಚಾರ ಸಹಿತ ನೂರಾರು ವಾಹನಗಳು ಸಂಚಾರ ನಡೆಸುತ್ತಿರುವ ರಸ್ತೆ ಇದಾಗಿದೆ. ಅಲ್ಲದೆ ಕರ್ನಾಟಕಕ್ಕೆ ಸಂಪರ್ಕಿಸುತ್ತಿದೆ. ಈ ಸಂಕದ ಮೂಲಕ ಘನಗಾತ್ರದ ವಾಹನ ಸಂಚರಿಸಿದಲ್ಲಿ ಸಂಕ ಪೂರ್ತಿ ಕುಸಿದು ಸಂಚಾರವೇ ಮೊಟಕುಗೊಳ್ಳುವ ಸಾದ್ಯತೆ ಉಂಟಾಗ ಬಹುದೆಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದೆ. ಅಪಾಯ ಸಂಭವಿಸುವ ಮೊದಲೇ ಅಧಿಕಾರಿಗಳು ಎಚ್ಚೆತ್ತುಹೊಂಡು ಸಂಕವನ್ನು ದುರಸ್ಥಿಗೊಳಿಸಲು ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.





