ಆ.8ರವರೆಗೆ ಮಂಗಳೂರು-ಬೆಂಗಳೂರು ನಡುವಿನ ರೈಲು ಸಂಚಾರ  ರದ್ದು

Share with



ಮಂಗಳೂರು: ಸಕಲೇಶಪುರ ತಾಲೂಕು ಎಡಕುಮೇರಿ ಹಾಗೂ ಕಡಗರಳ್ಳಿ ನಡುವಿನ ದೋಣಿಗಲ್‌ನಲ್ಲಿ ಭೂಕುಸಿತದಿಂದ ಸ್ಥಗಿತಗೊಂಡಿರುವ ಮಂಗಳೂರು-ಬೆಂಗಳೂರು  ರೈಲು ಸಂಚಾರ ಆಗಸ್ಟ್ 8ರ ನಂತರವೇ ಪುನರಾರಂಭಗೊಳ್ಳಲಿದೆ ಎಂದು ಮೈಸೂರು ರೈಲ್ವೆ ವಿಭಾಗವು ಮಾಹಿತಿಯನ್ನು ನೀಡಿದೆ.

ಸಕಲೇಶಪುರದ ಎಡ ಕುಮೇರಿ ಮತ್ತು ಕಡಗರವಳ್ಳಿ ರೈಲು ನಿಲ್ದಾಣಗಳ ನಡುವೆ ರೈಲು ಹಳಿ ಪಕ್ಕ ಭೂ ಕುಸಿತ ಉಂಟಾಗಿರುವುದರಿಂದ ಬೆಂಗಳೂರು-ಮಂಗಳೂರು ನಡುವೆ 12 ರೈಲುಗಳ ಸಂಚಾರವನ್ನು ಜು.27ರಿಂದ ರದ್ದುಪಡಿಸಲಾಗಿದ್ದು, ಆಗಸ್ಟ್ 8ರವರೆಗೆ ಮುಂದುವರಿಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಭಾರೀ ಭೂಕುಸಿತದಿಂದ ಹಳಿಯ ಮೇಲೆ ಮಣ್ಣು ಬಿದ್ದ ಪರಿಣಾಮವಾಗಿ 12 ರೈಲುಗಳ ಸೇವೆಗಳನ್ನು ರದ್ದುಗೊಳಿಸಲಾಗಿದ್ದು, ಕೆಲವು ರೈಲುಗಳ ಸಂಚಾರ ಮಾರ್ಗವನ್ನು ಬದಲಾವಣೆ ಮಾಡಲಾಗಿತ್ತು.

ಘಟನಾ ಸ್ಥಳದ ಪಕ್ಕದಲ್ಲಿ ರಿಟೈನರ್ ವಾಲ್ ನಿರ್ಮಾಣ ಕಾರ್ಯವು ತ್ವರಿತಗತಿಯಲ್ಲಿ ಸಾಗುತ್ತಿದ್ದು, ಟ್ರ‍್ಯಾಕ್ ಕಂಡೀಷನಿಂಗ್ ಕೆಲಸ ಬಹುತೇಕ ಪೂರ್ಣಗೊಂಡಿದೆ. ದುರಸ್ತಿ ಮಾಡಿದ ಹಳಿಯ ಮೇಲೆ ಗೂಡ್ಸ್ ರೈಲುಗಳನ್ನು ಪ್ರಾಯೋಗಿಕವಾಗಿ ಓಡಿಸಲಾಗುತ್ತದೆ. ಆದರೆ ಪ್ರಯಾಣಿಕರ ರೈಲು ಸಂಚಾರಕ್ಕೆ ಹೆಚ್ಚಿನ ಸುರಕ್ಷತಾ ಕ್ರಮಗಳು ನಡೆಯಬೇಕಾಗಿದೆ. ಈ ಹಿನ್ನೆಲೆ ಆಗಸ್ಟ್ 8 ರವರೆಗೆ ಮಂಗಳೂರು ಮತ್ತು ಬೆಂಗಳೂರು ನಡುವೆ ಯಾವುದೇ ರೈಲು ಸೇವೆ ಇರುವುದಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *