ಧರ್ಮಸ್ಥಳ ಗ್ರಾಮಾಭಿ ವ್ರಿದ್ದಿ ಯೋಜನೆಯ ಪೈವಳಿಕೆ ವಲಯ ಪದಾಧಿಕಾರಿಗಳ ತರಬೇತಿ

Share with

ಉಪ್ಪಳ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಪೈವಳಿಕೆ ವಲಯ ಯೋಜನೆ ಬಿ. ಸಿ ಟ್ರಸ್ಟ್(ರಿ ) ಮಂಜೇಶ್ವರ ಇದರ ಆಶ್ರಯದಲ್ಲಿ ಪೈವಳಿಕೆ ವಲಯದ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮ “ಕುಲಾಲ ಭವನ” ಲಾಲ್ ಬಾಗ್ ಇಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಗೌರವಾನ್ವಿತ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ ನೆರವೇರಿಸಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಡೆದು ಬಂದ ಹಾದಿ ಸುಧೀರ್ಘ ನಾಲ್ಕು ದಶಕಗಳ ಸಾಮಾಜಿಕ ಕ್ಷೇತ್ರದಲ್ಲಿ ಮಾಡಿದ ಸೇವೆಯ ಬಗ್ಗೆ ಮಾಹಿತಿ ನೀಡಿದರು. ಧರ್ಮಸ್ಥಳ ಕ್ಷೇತ್ರದಲ್ಲಿ ಮಾತ್ರ ನಡೆಯುತ್ತಿದ್ದ ಚತುರ್ದಾನಕ್ಕೆ ಪರಮ ಪೂಜ್ಯ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಹೊಸ ರೂಪವನ್ನು ಕೊಟ್ಟು ಇಂದು ರಾಜ್ಯದಲ್ಲಿ ಮಾತ್ರವಲ್ಲದೆ ಹೊರ ರಾಜ್ಯಕ್ಕೂ ಯೋಜನೆಯನ್ನು ವಿಸ್ತರಣೆ ಮಾಡಿ. ಅದೆಷ್ಟೋ ಸಣ್ಣ ಹಾಗೂ ಮಧ್ಯಮ ವರ್ಗದ ರೈತರ, ಬಡವರ, ಮಹಿಳೆಯರ ಮತ್ತುನಿರ್ಗತಿಕರ ಬದುಕನ್ನು ಬದಲಾಯಿಸಿದ ಹಿರಿಮೆ ಯೋಜನೆಗಿದೆ.ಎಂದರು. ಆಯ್ಕೆಯಾದ ಪದಾಧಿಕಾರಿಗಳು ಯೋಜನೆಯ ಮುಖಾಂತರ ಸಮಾಜ ಸೇವೆ ಮಾಡಿ ಒಕ್ಕೂಟಗಳ ನಿರ್ವಹಣೆ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು ತಾಲೂಕಿನ ಯೋಜನಾಧಿಕಾರಿಯಾದ ಶಶಿಕಲಾ ಸುವರ್ಣ ಮೇಡಂ ಯೋಜನೆಯಲ್ಲಿ ಯೋಜನೆಯ ಸದಸ್ಯರಿಗೆ ಮತ್ತು ಅವರ ಮನೆಯವರಿಗೆ ಸಿಗುವಂತ ಸವಲತ್ತುಗಳಾದ ಸಂಪೂರ್ಣ ಸುರಕ್ಷಾ, ಪ್ರಗತಿ ರಕ್ಷಕವಚ, ಜನ ಮಂಗಲ ಕಾರ್ಯಕ್ರಮ. ವಿದ್ಯಾರ್ಥಿ ಗಳಿಗೆ ಕೊಡಲ್ಪಡುವ ಸುಜ್ಞಾನಿಧಿ, ನಿರ್ಗತಿಕರಿಗೆ ಮಾಸಾಸನ ಹಾಗೂ ಇನ್ನಿತರ ಹತ್ತು ಹಲವು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಪ್ರಗತಿ ನಿಧಿಗೆ ವಿಧಿಸಲ್ಪಡುವ ಸೇವಾ ಶುಲ್ಕದ ಬಗ್ಗೆ ಲೆಕ್ಕಪರಿಶೋಧಕರಾದ ಪವಿತ್ರಾಕ್ಷಿಯವರು ಮಾಹಿತಿ ನೀಡಿದರು, ಸುಂಕದಕಟ್ಟೆ ವಲಯದ ಮೇಲ್ವಿಚಾರಕರಾದ ಕೃಷ್ಣಪ್ಪ, ವಲಯದ ಅಧ್ಯಕ್ಷರು ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳು ಭಾಗವಹಿಸಿದ ಎಲ್ಲರನ್ನು ಸೇವಾ ಪ್ರತಿನಿಧಿ ಲೀಲಾವತಿ ಸ್ವಾಗತಿಸಿ, ಜಯಶ್ರೀ ಧನ್ಯವಾದ ವಿತ್ತರು ವಲಯ ಮೇಲ್ವಿಚಾರಕರಾದ ಸಹದೇವ ಕಾರ್ಯಕ್ರಮ ನಿರ್ಮಿಸಿದರು.


Share with

Leave a Reply

Your email address will not be published. Required fields are marked *