ಉಪ್ಪಳ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೇಷ್ಟ ಕಾರ್ಯಕರ್ತ ಗೋಪಾಲ ಚೆಟ್ಟಿಯಾರ್ [೭೮] ರವರಿಗೆ ನುಡಿನಮನ ಕಾರ್ಯಕ್ರಮ ನಿನ್ನೆ ಬೆಳಿಗ್ಗೆ ಮನೆಯಲ್ಲಿ ನಡೆಯಿತು. ಕೇರಳ ಪ್ರಾಂತ ಸಂಘ ಚಾಲಕ್‌ಅಡ್ವ ಕೆ.ಕೆ ಬಲರಾಂ, ಕರ್ನಾಟಕ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಕಲ್ಲಡ್ಕ ಪ್ರಭಾಕರ ಭಟ್ ನುಡಿನಮನ ಸಲ್ಲಿಸಿದರು.
ಕರ್ನಾಟಕದ ಮಾಜಿ ಸಚಿವ ನಾಗರಾಜ್ ಶೆಟ್ಟಿ, ಮಾಜಿ ಶಾಸಕರಾದ ಎಸ್.ಅಂಗಾರ, ಕಣ್ಣೂರು ವಿಭಾಗ ಸಹ ಸಂಘಚಾಲಕ್ ಎನ್.ಸಿ.ಟಿ ರಾಜಗೋಪಾಲ್, ಕರ್ನಾಟಕದ ಹಿರಿಯ ಪ್ರಚಾರಕರಾದ ದಾ.ಮ ರವೀಂದ್ರ, ಪ್ರಾಂತ ಸಹ ಪ್ರಚಾರಕ್, ನಂದೇಶ್, ಪ್ರಾಂತ ಸಹ ಕಾರ್ಯವಾಹ ಪಿ.ಎಸ್ ಪ್ರಕಾಶ್, ಸೀತಾರಾಮ, ಸತೀಶ್ ಕುತ್ಯಾರು, ಶರಣ್ ಪಂಪ್ ವೆಲ್, ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ಅಡ್ವ ಶ್ರೀಕಾಂತ್, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹಾಗೂ ಕೇರಳ, ಕರ್ನಾಟಕದ ಬಿಜೆಪಿ, ಬಿ.ಎಂ.ಎಸ್, ಸಹಕಾರ ಭಾರತಿ ಸೇರಿದಂತೆ ವಿವಿಧ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು. ನಿಧನಕ್ಕೆ ಬಿಜೆಪಿ ಜಿಲ್ಲಾ ಸಮಿತಿ, ಕುಂಬಳೆ ಮಂಡಲ ಸಮಿತಿ, ಮಂಗಲ್ಪಾಡಿ ಪಂಚಾಯತ್ ಸಮಿತಿ ಹಾಗೂ ರಾಜ್ಯ, ಜಿಲ್ಲಾ , ಮಂಡಲ, ಪಂಚಾಯತ್ ಮಟ್ಟದ ನೇತಾರರು ಸಂತಾಪ ಸೂಚಿಸಿದರು.