ಕಾಸರಗೋಡು: ಇಲ್ಲಿನ ನೆಲ್ಲಿಕುಂಜೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಉತ್ಸವದ ಶುಭದಿನದಂದು ದೇವಸ್ಥಾನ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾಗಿ ಕಾರ್ಯಕ್ರಮದ ರೂವಾರಿಯಾದ ಇತ್ತಿಚಗೆ ಚನೈಯಲ್ಲಿ ಸಮಾಜಸೇವೆಗಾಗಿ ಗೌರವ ಡಾಕ್ಟರೇಟ್ ಪಡೆದ ಡಾl ಕೆ.ಎನ್. ವೆಂಕಟ್ರಮಣ ಹೊಳ್ಳ ಇವರನ್ನು ಕ್ಷೇತ್ರ ಸಮಿತಿಯ ಪರವಾಗಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹೇಶ್ ನೆಲ್ಲಿಕುಂಜೆ, ಕಾರ್ಯದರ್ಶಿ ಅರವಿಂದ ಉಪಾಧ್ಯಕ್ಷ ಬಾಲಕೃಷ್ಣ, ಕೋಶಾಧಿಕಾರಿ ಉಮೇಶ್ ಸದಸ್ಯರಾದ ರಮೇಶ್ ಬಾಬು, ಅಶೋಕ ಪಾಡಿ, ಬೃಜೇಶ್, ಮಂಜುನಾಥ, ಸುನಿಲ್, ಪವಿತ್ರ, ಮನು, ರೋಶನ್ ಮೊದಲಾದವರು ಸೇರಿ ಪೇಟ, ಶಾಲುಹೊದಿಸಿ, ಹಾರ, ಫಲಪುಷ್ಪ,ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.