ಇಸ್ರೇಲ್ ಎದುರು ಮಂಡಿಯೂರುವಂತೆ ಇರಾನ್ಗೆ ಟ್ರಂಪ್ ಒತ್ತಡ, ಟೆಹ್ರಾನ್ ಮೇಲೆ ತೀವ್ರಗೊಂಡ ಇಸ್ರೇಲ್ ದಾಳಿ

Share with

ವಾಷಿಂಗ್ಟನ್, ಜೂನ್ 18:   ಇರಾನ್(Iran) ಹಾಗೂ ಇಸ್ರೇಲ್(Israel) ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಿದೆ. ಟೆಹ್ರಾನ್(Tehran) ಜನ ತಮ್ಮ ಮನೆಗಳನ್ನು ತೊರೆದು ಹೋಗುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ನೀಡಿದ್ದ ಎಚ್ಚರಿಕೆ ಬಳಿಕ ಇರಾನ್ ಮೇಲೆ ಇಸ್ರೇಲ್ ದಾಳಿ ತೀವ್ರಗೊಂಡಿದೆ. ಬುಧವಾರ ಮುಂಜಾನೆ ಇಸ್ರೇಲ್ ಇರಾನ್ ರಾಜಧಾನಿ ಮೇಲೆ ವಾಯು ದಾಳಿ ನಡೆಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೆಹ್ರಾನ್ ಜನರಿಗೆ ನಗರವನ್ನು ತೊರೆಯುವಂತೆ ಜತೆಗೆ  ಇಸ್ರೇಲ್ ಎದುರು ಯಾವುದೇ ಷರತ್ತುಗಳಿಲ್ಲದೆ ಶರಣಾಗುವಂತೆ ಒತ್ತಾಯಿಸಿದ್ದರು. ಇದಾದ ಬಳಿಕ ದಾಳಿ ಮತ್ತಷ್ಟು ಹೆಚ್ಚಿದೆ. ಟೆಹ್ರಾನ್ ನಿವಾಸಿಗಳು ಗುಂಪು ಗುಂಪಾಗಿ ಮನೆಗಳನ್ನು ತೊರೆದಿದ್ದಾರೆ.

ಇರಾನ್ ವಾಯು ಪ್ರದೇಶದ ಮೇಲೆ ಅಮೆರಿಕದ ಹಿಡಿತ ಇರಾನ್ ವಾಯುಪ್ರದೇಶದ ಮೇಲೆ ಅಮೆರಿಕ ಈಗ ಸಂಪೂರ್ಣ ನಿಯಂತ್ರಣ ಹೊಂದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇರಾನ್ ಉತ್ತಮ ಶಸ್ತ್ರಾಸ್ತ್ರಗಳು ಮತ್ತು ಸ್ಕೈ ಟ್ರ್ಯಾಕರ್‌ಗಳನ್ನು ಹೊಂದಿದೆ, ಆದರೆ ಅಮೆರಿಕಕ್ಕಿಂತ ಉತ್ತಮವಾಗಿಲ್ಲ ಎಂದು ಅವರು ಹೇಳಿದರು. ಇಸ್ರೇಲ್-ಇರಾನ್ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಬಂದಿದ್ದು, ಇದು ಇರಾನ್‌ನಲ್ಲಿ ಮಾತ್ರವಲ್ಲದೆ ಜಾಗತಿಕ ನಾಯಕರಲ್ಲಿಯೂ ಭೀತಿಯನ್ನು ಸೃಷ್ಟಿಸಿದೆ.

ಇರಾನ್‌ಗೆ ಟ್ರಂಪ್ ಎಚ್ಚರಿಕೆ ಟ್ರಂಪ್ ಇರಾನ್ಗೆ ಪರಮಾಣು ಶಸ್ತ್ರಾಸ್ತ್ರಗಳ ತಯಾರಿಕೆಯನ್ನು ನಿಲ್ಲಿಸುವಂತೆ ಎಚ್ಚರಿಕೆ ನೀಡಿದ್ದರು. ಟೆಹ್ರಾನ್ ಜನರು ತಕ್ಷಣ ನಗರವನ್ನು ಖಾಲಿ ಮಾಡಬೇಕು ಎಂದು ಅವರು ಸ್ಪಷ್ಟವಾಗಿ ಹೇಳಿದ್ದರು. ನಾನು ಹೇಳಿದ್ದ ಒಪ್ಪಂದಕ್ಕೆ ಇರಾನ್ ಸಹಿ ಹಾಕಲಿಲ್ಲ, ಈಗ ಪರಿಣಾಮವನ್ನು ಎದುರಿಸಲಿ. ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯಲು ನಾವು ಬಿಡುವುದಿಲ್ಲ ಎಂದು ಹೇಳಿದ್ದರು.


Share with

Leave a Reply

Your email address will not be published. Required fields are marked *