ಮಂಗಳೂರು: ಜಗತ್ತಿನ ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾದ ಗೂಗಲ್ ತನ್ನ ಭಾಷಾಂತರ ಸೇವೆಗಳಲ್ಲಿ ತುಳುವನ್ನೂ ಸೇರಿಸಿದೆ.
ಒಟ್ಟು 110 ಭಾಷೆಗಳನ್ನು ಗೂಗಲ್ ಟ್ರಾನ್ಸ್ ಲೇಟ್ ಸೇವಾ ಪಟ್ಟಿಗೆ ಸೇರಿಸಿರುವುದಾಗಿ ಗೂಗಲ್ ಜೂ.27ರಂದು ತನ್ನ ಹೇಳಿಕೆಯಲ್ಲಿ 3໑໖.
ಇನ್ನು ಮುಂದೆ ತುಳು ಭಾಷೆಯಲ್ಲಿ ಯಾವುದೇ ಪದವನ್ನು ಅರಿತುಕೊಳ್ಳಬೇಕಾದವರು ಗೂಗಲ್ ట్రాన్సాలి టోగి ಹೋಗಿ ಯಾವುದೇ
ಭಾಷೆಯಿಂದಲೂ ತುಳು ಪದಗಳ ಅರ್ಥ ತಿಳಿದುಕೊಳ್ಳಬಹುದು.
ಒಂದೆಡೆ ಸರಕಾರಗಳು ಇನ್ನೂ ತುಳುವನ್ನು ಅಧಿಕೃತ ರಾಜ್ಯಭಾಷೆಯನ್ನಾಗಿ ಮಾಡಲು ಹಾಗೂ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ಆಗದಿರುವ ನಡುವೆಯೇ ಬಹುರಾಷ್ಟ್ರೀಯ ಐಟಿ ಕಂಪೆನಿಯೊಂದು ತುಳುವನ್ನು ತಮ್ಮ ಟ್ರಾನ್ಸ್‌ಲೇಟ್ ಪಟ್ಟಿಯಲ್ಲಿ ಸೇರಿಸಿರುವುದು ಲಕ್ಷಾಂತರ ತುಳುವರಿಗೆ ಸಂದ ಗೌರವ ಎಂದು ತುಳುವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದರ ಹಿಂದೆ ಬಹಳ ದಿನಗಳ ಕೆಲಸ ಇದೆ. ತುಳುವಿನ ದೊಡ್ಡ ಪ್ರಮಾಣದ ಶಬ್ದಗಳು, ವಾಕ್ಯ ಗಳನ್ನು ಮೆಷಿನ್ ಲರ್ನಿಂಗ್ ವ್ಯವಸ್ಥೆಗೆ ಸೇರಿಸಬೇಕಾ ಗುತ್ತದೆ. 25 ಲಕ್ಷಕ್ಕೂ ಅಧಿಕ ಮಂದಿ ಮಾತನಾಡುವ ತುಳುವಿನ ಮಹತ್ವವನ್ನು ಅರಿತುಕೊಂಡು ಈ ಸೇರ್ಪಡೆ ಮಾಡಿದೆ. ಇದು ದೊಡ್ಡ ಸಂಗತಿ ಎನ್ನುತ್ತಾರೆ ಮಾಹಿತಿ ತಂತ್ರಜ್ಞಾನ ತಜ್ಞ ಯು.ಬಿ.ಪವನಜ.
ಹೇಗೆ ಸೇರ್ಪಡೆ?
ನ್ಯಾಚುರಲ್ ಲ್ಯಾಂಗೇಂಜ್ ಪ್ರಾಸೆಸಿಂಗ್ ಆಧಾರದಲ್ಲಿ ಗೂಗಲ್‌ನಲ್ಲಿ ಭಾಷೆಗಳನ್ನು ಸೇರಿಸಲಾಗುತ್ತದೆ. ಇದರಲ್ಲಿ ಎರಡು ವಿಧಗಳಿವೆ- ರೂಲ್ ಬೇ ಹಾಗೂ ಸ್ಟಾಟಿಸ್ಟಿಕಲ್ ಬೇಸ್ಟ್, ಸ್ಟಾಟಿಸ್ಟಿಕಲ್ ಬೇಸ್ ಆಗಿದ್ದರೆ ಅದಕ್ಕೆ ಅಗಾಧವಾದ ಸಾಮಗ್ರಿ (ಕಾರ್ಪಸ್) ಬೇಕಾಗುತ್ತದೆ. ನಾಮಪದ, ಕ್ರಿಯಾಪದ ಇತ್ಯಾದಿ ಸೇರಿಕೊಂಡು ಸುಮಾರು 20 ಲಕ್ಷದಷ್ಟು ವಾಕ್ಯಗಳ ಅನುವಾದವನ್ನು ಮೆಷಿನ್ ಲರ್ನಿಂಗ್‌ಗೆ ಪೂರಕವಾಗಿ ಫೀಡ್ ಮಾಡಲಾಗುತ್ತದೆ. ಬಳಿಕ ಇದನ್ನು ಮೆಷಿನ್ ಅರಿತುಕೊಂಡು ಭಾಷಾಂತರ ಮಾಡುತ್ತದೆ. ಇದನ್ನು ಬಳಕೆ ಮಾಡಿಕೊಂಡಷ್ಟೂ ಸುಧಾರಣೆಯಾಗುತ್ತಾ ಹೋಗುತ್ತದೆ.
ತುಳು ಸೇರ್ಪಡೆಯಿಂದ ಮುಂದೆ ವಿಕಿಪೀಡಿಯಾ ಟ್ರಾನ್ಸ್‌ಲೇಷನ್‌ಗೆ ಬೇಕಾದ ಟೂಲ್‌ಗಳಿಗೂ ತುಳು ಬರಬಹುದು. ಸದ್ಯ ಕನ್ನಡದ್ದು ಮಾತ್ರವಿದೆ. ಇದರಿಂದ ತುಳು ಭಾಷಾಂತರ ಇನ್ನಷ್ಟು ಸಮೃದ್ಧಗೊಳ್ಳಲಿದೆ ಎನ್ನುತ್ತಾರೆ ಪವನಜ.