
ಉಪ್ಪಳ: ನಂದಿಕೇಶ್ವರ ನಾಟಕ ಸಂಘ ಮಂಗಳೂರು ಹಾಗೂ ಕನ್ನಡ ಸಂಸ್ಕ್ರತಿ ಇಲಾಖೆ ಬೆಂಗಳೂರು ಇದರ ಆಶ್ರಯದಲ್ಲಿ ಉಡುಪಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಕೆರೋಕೆ ಗಾಯನ ಕಾರ್ಯಕ್ರಮ ದಲ್ಲಿ ತುಳುರಂಗ ಭೂಮಿ ಕಲಾವಿದ ಸೋಮನಾಥ ಶೆಟ್ಟಿ ಮಂಗಲ್ಪಾಡಿ ಇವರಿಗೆ ” ತುಳುನಾಢ ಕಲಾ ಸಿಂಧೂರ ” ಎಂಬ ಬಿರುದು ನೀಡಿ ಸನ್ಮಾನಿಸಲಾಯಿತು.ಕಾ
ರ್ಯಕ್ರಮದಲ್ಲಿ ಕಾಪು ವಿಧಾನಸಭಾ ಶಾಸಕ ಸುರೇಶ್ ಶೆಟ್ಟಿ ಗುರ್ಮೆ , ಭಾರತೀಯ ಮಾನವ ಹಕ್ಕುಗಳ ಮಂಡಳಿಯ ರಾಜ್ಯಾಧ್ಯಕ್ಷರಾದ ಪ್ರಸಾದ್ ರೈ , ನಿರ್ದೇಶಕ, ನಿರ್ಮಾಪಕ ಅಸ್ಕರ್ ಕೃಷ್ಣ , ನಟ ನಿರ್ಮಾಪಕ ನಂದನ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.





