ಮಂಜೇಶ್ವರ : ಕಳೆದ 12 ವರ್ಷಗಳಿಂದ ಗಡಿನಾಡ ಪ್ರದೇಶವಾದ ತೂಮಿನಾಡಿನಲ್ಲಿ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದು ಹಾಗೂ ಈ ಪ್ರದೇಶವನ್ನು ಮಾದಕ ದ್ರವ್ಯ ಮುಕ್ತವನ್ನಾಗಿಸಲು ಇಲ್ಲಿಯ ಯುವಕರನ್ನು ಒಗ್ಗೂಡಿಸಿಗೊಂಡು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ತೂಮಿನಾಡು ಅರಬ್ ರೈಡರ್ಸ್ ಕ್ಲಬ್ಬಿನ 12 ನೇ ವಾರ್ಷಿಕೋತ್ಸವದಂಗವಾಗಿ ಹಮ್ಮಿ ಕೊಳ್ಳಲಾದ ಕೇರಳ
ರಾಜ್ಯ ಮಟ್ಟದ 16 ತಂಡಗಳನ್ನೊಳಗೊಂಡ ಹೊನಲು ಬೆಳಕಿನ ಕೇರಳ ಸೀನಿಯರ್ ಕಬಡ್ಡಿ ಟೂರ್ನಮೆಂಟ್ ಸಮಾಪ್ತಿಗೊಂಡಿತು.
ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಪಂದ್ಯಾಟವನ್ನು ಉದ್ಘಾಟಿಸಿದರು. ಕ್ಲಬ್ ಅಧ್ಯಕ್ಷ ಅಶ್ರಫ್ ಸಕ್ಲಿನ್ ಅಧ್ಯಕ್ಷತೆ ವಹಿಸಿದರು. ಪಂದ್ಯಾಟದ ಚೇಯರ್ಮ್ಯಾನ್ ಇಲ್ಯಾಸ್ ತೂಮಿನಾಡು ಅತಿಥಿಗಳನ್ನು ಬರಮಾಡಿಕೊಂಡರು.
ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಮಂಜೇಶ್ವರ ಗ್ರಾಮ ಪಂಚಾಯತು ಅಧ್ಯಕ್ಷೆ ಜೀನ್ ಲವಿನಾ ಮೊಂತೇರೋ, ಉಪಾಧ್ಯಕ್ಷ ಮೊಹಮ್ಮದ್ ಸಿದ್ದೀಖ್, ಅಝೀಝ್ ಹಾಜಿ, ಮುಸ್ತಫ ಕಡಂಬಾರ್, ದಯಾಕರ ಮಾಡ, ಮುನೀರ್, ಮುಸ್ತಫ ಉದ್ಯಾವರ ಸೇರಿದಂತೆ ಹಲವು ಪ್ರಮುಖರು ಉಪಸ್ಥರಿದ್ದರು.
ವೇದಿಕೆಯಲ್ಲಿ ಒಲಿಂಪಿಕ್ಸ್ ಮಾದರಿಯ ಕೇರಳದ ಮೊಟ್ಟಮೊದಲ ರಾಜ್ಯ ಶಾಲಾ ಕ್ರೀಡಾಕೂಟದ ಸಬ್ ಜೂನಿಯರ್ ವಿಭಾಗದ 100 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಅಂಗಡಿ ಮೊಗರು ಶಾಲಾ ವಿದ್ಯಾರ್ಥಿ ನಿಯಾಸ್ ಆಹ್ಮದ್, ಹಾಗೂ ಐಟಿ ವಿಭಾಗದಲ್ಲಿ ಉತ್ತಮ ಸಾಧನೆಗೈದ ಸಿರಾಜುಲ್ ಹುದಾ ಶಾಲಾ ವಿದ್ಯಾರ್ಥಿ ಅಫ್ತಾಬ್ ಫಯಾಝ್ , ಸಮಾಜ ಸೇವಕ ಇಲ್ಯಾಸ್ ತೂಮಿನಾಡು ಹಾಗೂ ಮಂಜೇಶ್ವರದ ಶಾಸಕ ಎಕೆಎಂ ಅಶ್ರಫ್ ರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಪಂದ್ಯಾಟದಲ್ಲಿ ಸಂಘ ಶಕ್ತಿ ಮಧೂರು ಮೊದಲ ಸ್ಥಾನವನ್ನು ಪಡೆದು ಚಾಂಪಿಯನ್ ಟ್ರೋಫಿ ತನ್ನದಾಗಿಸಿದರು.
ರೆಡ್ ವರ್ಲ್ಡ್ ಕೊಪ್ಪಳ ದ್ವೀತಿಯ ಸ್ಥಾನದಲ್ಲಿ ತೃಪ್ತಿ ಪಡಕೊಂಡಿತು. ಎಕೆಜಿ ಆರಾಟ ಕಡವು ತೃತೀಯ ಸ್ಥಾನವನ್ನು ಪಡಕೊಂಡರೆ ತೂಮಿನಾಡು ಅರಬ್ ರೈಡರ್ಸ್ ನಾಲ್ಕನೇ ಸ್ಥಾನವನ್ನು ಪಡೆಯಿತು.
ಕಬಡ್ಡಿ ಆಟದ ಪ್ರಚಾರ ಹಾಗೂ ಯುವಕರಲ್ಲಿ ಕ್ರೀಡಾ ಮನೋಭಾವ ಬೆಳೆಸುವ ಉದ್ದೇಶದಿಂದ ಈ ಟೂರ್ನಿಯನ್ನು ಹಮ್ಮಿಕೊಳ್ಳಲಾಗಿತ್ತು.
ಅಬ್ದುಲ್ ಲತೀಫ್ ಬಾಬಾ, ಸಿದ್ದೀಖ್ ತಂಘಲ್, ಹಾಶಿಕ್, ಅನ್ವರ್, ತನ್ವೀರ್, ಇಸ್ಮಾಯಿಲ್, ತನ್ವೀರ್ ಆಹ್ಮದ್, ಸಮೀರ್ ಮೊದಲಾದವರು ನೇತೃತ್ವ ನೀಡಿದರು.
ಪಂದ್ಯಾಟವನ್ನು ವೀಕ್ಷಿಸಲು ಕೇರಳ ಕರ್ನಾಟಕದ ನಾನಾ ಭಾಗಗಳಿಂದ ಸಹಸ್ರಾರು ಕಬಡ್ಡಿ ಪ್ರೇಮಿಗಳ ಸಾಗರವೇ ಹರಿದು ಬಂದಿತ್ತು