ಗೋವಿಗೆ ಹಿಂಸೆ ನೀಡಿ ಕಾರಿನಲ್ಲಿ ತುರುಕಿ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ..; ಓರ್ವ ಪರಾರಿ

Share with

ಬ್ರಹ್ಮಾವರ: ಶಿರೂರು ಮೂರುಕೈ ನೀರ್ಜೆಡ್ಡು ಬಳಿ ದನವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ಹೈಕಾಡಿಯ ಮುಜಾಫಿರ್, ನೀರ್ಜೆಡ್ಡಿನ ಕೃಷ್ಣ ನಾಯ್ಕ ಬಂಧಿತರು. ಇನ್ನೋರ್ವ ಆರೋಪಿ ಹೈಕಾಡಿಯ ಮಹಮ್ಮದ್ ಯಾಸಿನ್ ತಲೆಮರೆಸಿಕೊಂಡಿದ್ದಾನೆ.

ಸಂಜೆ ವೇಳೆಗೆ ಹೊಸರಸ್ತೆಯ ಬದಿ ಇಕೋ ಸ್ಪೋರ್ಟ್ಸ್ ಕಾರಿನಲ್ಲಿ ಬಂದ ಮೂವರು ಆರೋಪಿಗಳು ದನವೊಂದಕ್ಕೆ ಹಿಂಸೆ ನೀಡಿ ಹಗ್ಗದಲ್ಲಿ ಕಟ್ಟಿ ಕಾರಿಗೆ ತುರುಕುತ್ತಿದ್ದರು. ಅದೇ ವೇಳೆಗೆ ಅಲ್ಲಿಗೆ ಬೈಕ್‌ನಲ್ಲಿ ಸಾರ್ವಜನಿಕರು ಬಂದ ಕಾರಣ ಮಹಮ್ಮದ್ ಯಾಸಿನ್ ಪರಾರಿಯಾದನು. ಮುಜಾಫಿರ್‌ನು ದನದ ಸಹಿತ ಕಾರನ್ನು ಚಲಾಯಿಸಿಕೊಂಡು ಗೋಳಿಯಂಗಡಿ ಕಡೆ ವೇಗವಾಗಿ ತೆರಳಿದನು.

ಬೈಕ್‌ನಲ್ಲಿ ಬಂದವರು ವಾಹನದ ನಂಬರ್ ಗಮನಿಸಿ ಬ್ರಹ್ಮಾವರ ಪೊಲೀಸರಿಗೆ ಮಾಹಿತಿ ನೀಡಿದರು. ಅದರ ಆಧಾರದಲ್ಲಿ ಆರೋಪಿಗಳನ್ನು ವಶಕ್ಕೆ ಬಂಧಿಸಿದ್ದಾರೆ. ಮುಜಾಫಿರ್‌ನನ್ನು ಕದ್ದೊಯ್ದ ದನ ಮತ್ತು ಕಾರಿನ ಸಹಿತ ಹೈಕಾಡಿಯಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಮುಜಾಫಿ‌ರ್ ಮತ್ತು ಮಹಮ್ಮದ್ ಯಾಸಿನ್ ಮಾಂಸಕ್ಕಾಗಿ ದನಗಳನ್ನು ಕದ್ದು ಸಾಗಿಸುವ ಕೃತ್ಯದಲ್ಲಿ ತೊಡಗಿದ್ದು, ಸ್ಥಳೀಯನಾದ ಕೃಷ್ಣ ನಾಯ್ಕ ಅವರಿಗೆ ದನಗಳನ್ನು ಒದಗಿಸುತ್ತಿದ್ದ ಎಂದು ತಿಳಿದು ಬಂದಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Share with

Leave a Reply

Your email address will not be published. Required fields are marked *