
ಮoಜೇಶ್ವರ: ಗುಜರಿ ಅಂಗಡಿಯಿಂದ ವಿವಿಧ ಸಾಮಾಗ್ರಿಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರನ್ನು ನಾಗರಿಕರು ಹಿಡಿದು ಪೋಲೀಸರಿಗೆ ಹಸ್ತಾಂತರಿದ್ದು, ಪೊಲೀಸರು ಬಂದಿಸಿದ್ದಾರೆ. ಕರ್ನಾಟಕ ಹಾಸನ ಬೇಳೂರು ಅಂಗಡಿ ಹಳ್ಳಿಯ ಬಬ್ರುವಾಹನ ಯಾನೆ ಅಶೋಕ್ [೨೩], ತಮಿಳುನಾಡಿನ ಶಿರಿಮಂಗಲA ಮಾವಾಟ್ಟಂ ಕಲ್ಲಗುಮುಚ್ಚಿಯ ಹರಿಶ್ಚಂದ್ರ [೩೫] ಎಂಬವರು ಬಂಧಿತ ಆರೋಪಿಗಳಾಗಿದ್ದಾರೆ. ಪೊಸೋಟುನಲ್ಲಿರುವ ಬಡಾಜೆ ನಿವಾಸಿ ಕರೀಂ ಎಂಬವರ ಮಾಲಕತ್ವದಲ್ಲಿರುವ ಗುಜರಿ ಅಂಗಡಿಯಿAದ ಶನಿವಾರ ರಾತ್ರಿ ಕಳವು ನಡೆದಿದೆ. ಒಂದು ಕಿಲೋ ಹಿತ್ತಾಳೆ ಸಾಮಗ್ರಿ, ಎರಡು ಸಿಸಿ ಕ್ಯಾಮರ ಗಳನ್ನು ಕಳವು ನಡೆಸಿದ್ದರು. ಕಳವುಗೈದ ಸಾಮಗ್ರಿಗಳೊಂದಿಗೆ ಭಾನುವಾರ ಮುಂಜಾನೆ ಉಪ್ಪಳ ರೈಲ್ವೇ ನಿಲ್ದಾಣಕ್ಕೆ ತಲುಪಿದ ಇಬ್ಬರನ್ನು ಕಂಡ ನಾಗರಿಕರಿಗೆ ಸಂಶಯ ಉಂಟಾಗಿತ್ತು. ಇದರಿಂದ ಅವರ ಕೈಯಲ್ಲಿದ್ದ ಬ್ಯಾಗ್‌ನ್ನು ತೆರೆದು ನೋಡಿದಾಗ ಹಿತ್ತಳೆ ಸಾಮಾಗ್ರಿಗಳು ಹಾಗೂ ಸಿಸಿ ಕ್ಯಾಮರಗಳು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಮಂಜೇಶ್ವರ ಪೋಲೀಸರನ್ನು ಕರೆಸಿ ಅವರನ್ನು ಹಸ್ತಾಂತರಿಸಲಾಯಿತು. ತನಿಖೆಗೊಳಪಡಿಸಿದಾಗ ಕರೀಂ ರವರ ಗುಜರಿ ಅಂಗಡಿಯಲ್ಲಿ ಕಳವು ನಡೆದ ವಿಷಯ ತಿಳಿದುಬಂದಿದೆ. ಇದೇ ಅಂಗಡಿಯಿಂದ ಈ ಹಿಂದೆ ಎರಡು ಬಾರಿ ಕಳವು ನಡೆದಿತ್ತು. ಅಂದು ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯಗಳಲ್ಲಿ ಕಂಡುಬಂದ ವ್ಯಕ್ತಿಗಳು ಪ್ರಸ್ತುತ ಸೆರೆಗೀಡಾದ ಬಬ್ರುವಾಹನ ಹಾಗೂ ಹರಿಶ್ಚಂದ್ರ ಎಂಬವರಾಗಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ.





