ಉಡುಪಿ: ಲೇಡಿ ಕಂಡಕ್ಟರ್ ಓರ್ವರು ಇನ್ನೊಂದು ಬಸ್ ನ ಕಂಡಕ್ಟರ್ ಮೇಲೆ ತೋರಿದ ದಾದಾಗಿರಿಯ ವಿಡಿಯೋ ವೈರಲ್ ಆಗುತ್ತಿದೆ.
ಉಡುಪಿಯ ಸಂತೆಕಟ್ಟೆ ಬಳಿ ಈ ಘಟನೆ ಸಂಭವಿಸಿದೆ. ಎಂದಿನಂತೆ ಖಾಸಗಿ ಬಸ್ ಗಳ ಟೈಮಿಂಗ್ ವಿಚಾರದಲ್ಲಿ ಈ ಗಲಾಟೆ ನಡೆದಿದೆ. ತನಗಿಂತ ಮೊದಲೇ ಬಂದು ಬಸ್ ನಿಲ್ಲಿಸಿದ್ದಕ್ಕಾಗಿ ಲೇಡಿ ಕಂಡಕ್ಟರ್ ರೇಖಾ ಎಂಬವರು ಬಸ್ ಗೆ ಹತ್ತಿ ಕಂಡಕ್ಟರ್ ನನ್ನು ತರಾಟೆಗೆ ತೆಗೆದುಕೊಂಡು ಜಾಡಿಸಿದ್ದಾರೆ.
ಒಂದು ಹಂತದಲ್ಲಿ ಚಪ್ಪಲಿಯನ್ನೂ ಕೈಗೆತ್ತಿಕೊಂಡಿದ್ದಾಳೆ. ಕೆಲ ಹೊತ್ತು ಈ ಲೇಡಿಯ ರೌದ್ರಾವತಾರ ಕಂಡು ಪ್ರಯಾಣಿಕರು ತಬ್ಬಿಬ್ಬಾಗಿದ್ದಾರೆ. ಕೊನೆಗೆ ಇಬ್ಬರೂ ಪರಸ್ಪರ ಹೊಡೆದಾಡಿಕೊಂಡ ಬಳಿಕ, ಆಕೆ ಬಸ್ ನಿಂದ ಇಳಿದು ಹೋಗಿದ್ದಾಳೆ. ಸದ್ಯ ಈ ಘಟನೆಯ ಸಿಸಿಟಿವಿ ಫೂಟೇಜ್ ವೈರಲ್ ಆಗುತ್ತಿದೆ.