ಬೆಳಗಾವಿ: ನೆರೆಯ ಮಹಾರಾಷ್ಟ್ರದ ತಿಲಾರಿ ಡ್ಯಾಂ ನಲ್ಲಿ ರಿವರ್ ಕ್ರಾಸಿಂಗ್ ತರಬೇತಿಗೆ ಹೋಗಿದ್ದ ಬೆಳಗಾವಿ ಕಮಾಂಡೋ ಸೆಂಟರ್ ನ (Commando center belagavi) ಇಬ್ಬರು ಕಮಾಂಡೋಗಳು ಬೋಟ್ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.
ಬೆಳಗಾವಿಯ ಜೆಎಲ್ ವಿಂಗ್ ಕಮಾಂಡೋ ತರಬೇತಿ ಕೇಂದ್ರದ ರಾಜಸ್ಥಾನ ಮೂಲದ ವಿಜಯಕುಮಾರ ದಿನವಾಲ್ (28) ಹಾಗೂ ಪಶ್ಚಿಮ ಬಂಗಾಲದ ದಿವಾಕರ ರಾಯ್ (26) ಮೃತಪಟ್ಟಿದ್ದಾರೆ.
ಮೃತಪಟ್ಟಿರುವ ಇಬ್ಬರು ಜವಾನರು ಕಮಾಂಡೋ ಸೆಂಟರ್ ನ ಸೈನಿಕರಿಗೆ ರಿವರ್ ಕ್ರಾಸ್ಸಿಂಗ್ ತರಬೇತಿ ನೀಡುತ್ತಿದ್ದರು. ಬೋಟ್ ನಲ್ಲಿ ರಿವರ್ ಕ್ರಾಸಿಂಗ್ ಮಾಡುತ್ತಿದ್ದ ಆರು ಜನ ಸೈನಿಕರ ಪೈಕಿ ಇಬ್ಬರು ಮೃತಪಟ್ಟಿದ್ದು, ನಾಲ್ವರು ಬದುಕುಳಿದಿದ್ದಾರೆ.
ಬೆಳಗಾವಿಯ ಕಮಾಂಡೋ ತರಬೇತಿ ವಿಭಾಗದ ಇಬ್ಬರು ಸೈನಿಕರು ರಿವರ್ ಕ್ರಾಸಿಂಗ್ ತರಬೇತಿ ಪಡೆಯಲು ತಿಲ್ಲಾರಿ ಡ್ಯಾಂ ಹಿನ್ನೀರಿನ ಜಲಪ್ರದೇಶಕ್ಕೆ ತೆರಳಿದ್ದರು. ಹಿನ್ನೀರಿನ ಒಂದು ದಡದಿಂದ ಇನ್ನೊಂದು ದಡಕ್ಕೆ ಬೋಟ್ ನಲ್ಲಿ ಆರು ಜನ ಸೈನಿಕರು ತೆರಳಿದ್ದರು. ನಡು ಮಧ್ಯದಲ್ಲಿಯೇ ಬೋಟ್ ಮುಳುಗಿದ್ದರಿಂದ ಇಬ್ಬರು ಮೃತಪಟ್ಟಿದ್ದಾರೆ.