ಉಪ್ಪಳ : ಭಾರೀ ಗಾಳಿ ಮಳೆಗೆ ಮರ ಮುರಿದು ಬಿದ್ದು ಎರಡು ವಿದ್ಯುತ್ ಕಂಬಗಳು ಧಾರಾಶಾಯಿ ಯಾಗಿ ದ್ದು. ಸ್ಥಳೀಯ ಮನೆಯ ವರ ಸಮಯ ಪ್ರಜ್ಞೆಯಿಂದ ಸಂಭವಿಸಬಹುದಾದ ದುರಂತ ತಪ್ಪಿದೆ ಮಂಗಲ್ಪಾಡಿ ಪಂಚಾಯತ್ ನ 7ನೇ ವಾರ್ಡ್ ಪ್ರತಾಪನಗರದ ಒಳರಸ್ತೆ ಯಲ್ಲಿ ಜುಲೈ 23ರಂದು ಮುಂಜಾನೆ 2ಗಂಟೆಗೆ ಘಟನೆ ನಡೆದಿದೆ. ಈ ಪರಿಸರದ ಖಾಸಗಿ ವ್ಯಕ್ತಿಯ ಹಿತ್ತಿ ಲಿನಲ್ಲಿದ್ದ ಬೃಹತ್ ಗಾಳಿ ಮರ ಹಾಗೂ ತೆಂಗಿನ ಮರ ವಿದ್ಯುತ್ ತಂತಿ ಮೇಲೆ ಮುರಿದು ಬಿದ್ದು ಈ ಪರಿಸರದ ಎರಡು ವಿದ್ಯುತ್ ಕಂಬಗಳು ಹಾನಿಯಾಗಿದೆ. ಈ ವೇಳೆ ತಂತಿ ಸಡಿಲ ಗೊಂಡು ರಸ್ತೆಯಲ್ಲಿ ಜೋತಡುತ್ತಿತ್ತು. ಇದರಲ್ಲಿ ವಿದ್ಯುತ್ ಹರಿಯುತ್ತಿತ್ತು ಈ ಬಗ್ಗೆ ಇಲ್ಲಿನ ಮನೆಯೊಂದರ ಯಜಮಾನ ರವರ ಗಮನಕ್ಕೆ ಬಂದು ಸ್ಥಳೀಯ ಯುವಕರ ಸಹಾಯ ದಿಂದ ಇಲಾಖೆಯ ಅಧಿಕಾರಿಗೆ ಕರೆಮಾಡಿ ವಿದ್ಯುತ್ ವಿಚ್ಚೆಧಿಸಲಾಗಿದೆ. ಇದರಿಂದ ಸಂಭಾವಿಸಬಹುದಾದ ಅಪಾಯ ತಪ್ಪಿದೆ. ಈ ಸಂದರ್ಭದಲ್ಲಿ ವಾಹನ ಹಾಗೂ ಜನ ಸಂಚಾರ ಹಾದು ಹೋಗುವ ಆತಂಕದಿಂದ ಸ್ಥಳೀಯ ಯುವಕರು ನಿದ್ದೆಗೆಟ್ಟು ಬೆಳಕಾಗುವ ತನಕ ರಸ್ತೆಯಲ್ಲಿ ನಿಂತು ಜಾಗ್ರತೆ ವಹಿಸಿದರು. ರಾತ್ರಿ ಕೊಕ್ಕೆಚ್ಚಾಲ್. ಶಾಂತಿಗುರಿ ಸಹಿತ ವಿವಿಧ ಕಡೆಗಳಲ್ಲಿ ಮರ ಬಿದ್ದು ವಿದ್ಯುತ್ ಕಂಬ ಹನಿಗೊಂಡು ರಸ್ತೆ ತಡೆ ಉಂಟಾಗಿದೆ