ಪೈವಳಿಕೆ: ಪಂಚಾಯತಿನ 17ನೇ ವಾರ್ಡಿನ ಬಾಯಿಕ್ಕಟ್ಟೆ ಎಂಬಲ್ಲಿ ಶಾಂಭವಿ ಕೃಷ್ಣ ಎಂಬವರ ಮನೆಯ ಮೇಲೆ ಸೋಮವಾರ ರಾತ್ರಿ ಸುರಿದ ಗಾಳಿ ಮಳೆಗೆ ಮನೆಯ ಹಿಂಬದಿಯಲ್ಲಿದ್ದ ನುಗ್ಗೆ ಮರ ಬಿದ್ದು ಮನೆಯ ಬಚ್ಚಿಲು ಕೋಣೆ ಮತ್ತು ಅಡುಗೆ ಕೋಣೆ ಹಾನಿಯಾಗಿದೆ.ಮನೆಯ ಮಾಡಿನ ಹಂಚು ಮತ್ತು ಶೀಟುಗಳು ನಾಶವಾಗಿದೆ. ಹತ್ತಿರದಲ್ಲಿರುವ ಹೇಮಲತಾ ಎಂಬವರ ಮನೆಯ ಹಂಚು ಗಾಳಿಗೆ ನಾಶವಾಗಿದೆ. ಸ್ಥಳಕ್ಕೆ ಪಂಚಾಯತ್ ಸದಸ್ಯರಾದ ಅಬ್ದುಲ್ಲ , ಪೈವಳಿಕೆ ವಿಲೇಜ್ ಆಫೀಸರ್ ಮೊಯ್ದೀನ್ ಕುಂಞಿ, ವಿಲೇಜ್ ಫೀಲ್ಡ್ ಅಸಿಸ್ಟೆಂಟ್ ಬೈಜು ಎಂಬಿವರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.