ಕಾರು-ಲಾರಿ ಮಧ್ಯೆ ಅಪಘಾತ  ಇಬ್ಬರಿಗೆ ಗಾಯ

Share with

ಉಪ್ಪಳ: ಕಾರು-ಲಾರಿ ಮಧ್ಯೆ ಉಂಟಾದ ಅಪಘಾತದಲ್ಲಿ ಇಬ್ಬರು ಗಾಯಗೊಂಡ ಘಟನೆ  ಮಂಗಳವಾರ ಬೆಳಿಗ್ಗೆ ಉಪ್ಪಳ ಸರಕಾರಿ ಶಾಲಾ ಬಳಿಯ ರಸ್ತೆಯಲ್ಲಿ ನಡೆದಿದೆ. ಕಾರಿನಲ್ಲಿ ಸಂಚರಿಸುತ್ತಿದ್ದ ಉಪ್ಪಳ ಬಳಿಯ ಮೂಸೋಡಿ ನಿವಾಸಿಗಳಾದ ರಾಝಿಕ್ ಹಾಗೂ ನಾಝಿಯ ಎಂಬವರು ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಕಾಸರಗೋಡು ಭಾಗಕ್ಕೆ ತೆರಳುತ್ತಿದ್ದ ಕಾರು ಹಾಗೂ ಎದುರುಭಾಗದಿಂದ ಆಗಮಿಸಿದ ಲಾರಿ ಮಧ್ಯೆ ಅಪಘಾತ ಸಂಭವಿಸಿದೆನ್ನಲಾಗಿದೆ. ಅಪಘಾತದಲ್ಲಿ ಅಲ್ಪ ಹೊತ್ತು ಸಂಚಾರಕ್ಕೆ ತಡೆ ಉಂಟಾಗಿದ್ದು, ಪೋಲೀಸರು ಹಾಗೂ ಸ್ಥಳೀಯರ ಸಹಕಾರದಿಂದ ಸಂಚಾರ ಪುನಾರಾಂಭಿಸಿತು. ಅಪಘಾತದಲ್ಲಿ ಕಾರು ನುಜ್ಜು ನುಜ್ಜಾಗಿದೆ.


Share with

Leave a Reply

Your email address will not be published. Required fields are marked *